ಬಿ.ಮೂಡ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್: ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ
Update: 2018-05-26 17:33 IST
ಬಂಟ್ವಾಳ, ಮೇ 26: ಬಿ.ಮೂಡ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಿ ಉಮಾವತಿ ಶೆಟ್ಟಿ ಅವರನ್ನು ಶನಿವಾರ ಬಂಟ್ವಾಳ ವ್ಯವಸಾಯ ಬ್ಯಾಂಕ್ ಕಚೇರಿಯಲ್ಲಿ ಬೀಳ್ಕೊಡಲಾಯಿತು.
ಬ್ಯಾಂಕಿನ ಅಧ್ಯಕ್ಷ ಜಿ.ಆನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಬ್ಯಾಂಕ್ ನಿರ್ದೇಶಕ ಸದಾಶಿವ ಶೆಣೈ, ವಿದ್ಯಾವತಿ ಪ್ರಮೋದ್ ಕುಮಾರ್, ಲಕ್ಮೀ ಪ್ರಭು ಕೆ.ಎನ್.ಶೇಖರ್, ಧರಣೇಂದ್ರ ಪೂಜಾರಿ, ಮನೋಹರ, ಭವಾನಿ ಶಂಕರ್ ರಾವ್, ಬ್ಯಾಂಕ್‌ನ ವಲಯ ಮೇಲ್ವಿಚಾರಕ ಕೇಶವ ಕಿಣಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯಪ್ರಕಾಶ್ ಕಾಮತ್, ಸಿಬ್ಬಂದಿ ಹರೀಶ್ ಕಾಮಾಜೆ, ನಾರಾಯಣ, ದಿನೇಶ್, ಪುಷ್ಪಾವತಿ, ಸಂದೇಶ್, ನತಾಶ, ವಿಜಯಲತಾ, ರತ್ನಾಕರ ಮತ್ತು ಹರಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ನಿರೀಕ್ಷಾ ಕಾರ್ಯಕ್ರಮ ನಿರೂಪಿಸಿದರು.