ಮಕ್ಕಳ ಸೇವೆ ಭಗವಂತನಿಗೆ ಸಲ್ಲಿಸುವ ಪೂಜೆ: ಪೇಜಾವರ ಶ್ರೀ
ಉಡುಪಿ, ಮೇ 26: ಮಕ್ಕಳು ದೇವರ ಸಮಾನ. ತಂದೆ ತಾಯಿಯ ಆಶ್ರಯ ಇಲ್ಲದ ಮಕ್ಕಳಿಗೆ ಮಾತೃವಾತ್ಸಲ್ಯ ನೀಡಿ ಅವರ ಸರ್ವತೋಮುಖ ಅಭಿವೃದ್ಧಿ ಗಾಗಿ ದುಡಿಯುವುದು ಭಗವಂತನಿಗೆ ಮಾಡುವ ಪೂಜೆ ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.
ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡಿದ ಕನ್ಯಾನದ ಭಾರತ ಸೇವಾಶ್ರಮದ ಕಾರ್ಯ ದರ್ಶಿ ಈಶ್ವರ ಭಟ್ ಅವರಿಗೆ ‘ಬಾಲ ವಾತ್ಸಲ್ಯ ಸಿಂಧು’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಿನ್ನೆಸ್ ದಾಖಲೆ ಮಾಡಿದ ಬಾಲೆ ತನುಶ್ರೀ ಪಿತೆ್ರಿಡಿ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ. ಉಪಸ್ಥಿತರಿ ದ್ದರು. ಸನ್ಮಾನಿತರ ಪರಿಚಯವನ್ನು ಆಡಳಿತ ಮಂಡಳಿ ಸದಸ್ಯೆ ಸಂಧ್ಯಾ ರಮೇಶ್ ಮಾಡಿದರು. ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ವಾರ್ಷಿಕ ವರದಿ ವಾಚಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಕಮಲಾಕ್ಷ ಸ್ವಾಗತಿಸಿದರು. ರಾಘವೇಂದ್ರ ರಾವ್ ವಂದಿಸಿದರು. ನಂತರ ಗುರು ಶ್ರೀವಿಷ್ಣುಮೂರ್ತಿ ಉಪಾಧ್ಯಾಯರ ನಿರ್ದೇಶನ ದಲ್ಲಿ ಬಾಲನಿಕೇತನದ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ಜರಗಿತು.