ಅಮೆಮಾರ್ ಗೌಸಿಯಾ ಹುದಾ ಪೌಂಡೇಶನ್ ವತಿಯಿಂದ ರಮಝಾನ್ ಕಿಟ್ ವಿತರಣೆ
Update: 2018-05-26 18:16 IST
ಫರಂಗಿಪೇಟೆ, ಮೇ 26: ಗೌಸಿಯಾ ಹುದಾ ಪೌಂಡೇಶನ್ ಅಮೆಮಾರ್ ವತಿಯಿಂದ ಅರ್ಹ ಬಡ ನೂರು ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು.
ಸಂಸ್ಥೆಯ ಸ್ಥಾಪಕ ಸದಸ್ಯ ಅಕ್ತಾರ್ ಹುಸೈನ್ ಮತನಾಡಿ, ಜಬ್ಬಾರ್ ಉಸ್ತಾದ್ ಮಿತ್ತಬೈಲ್ ರವರ ನಿರ್ದೇಶನದಲ್ಲಿ ಮರ್ಹೂಮ್ ಜಮಾಲುದ್ದೀನ್ ಪೈಝಿ ರವರ ಗೌರವಾದ್ಯಕ್ಷತೆಯಲ್ಲಿ ಕಳೆದ ಹನ್ನೆರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆ ಇಂದು ವಿವಿಧ ವೈದಕೀಯ ಹಾಗು ಸಾಮುದಾಯಿಕ ಸೇವೆಯನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಬದ್ರಿಯಾ ಜುಮಾ ಮಸೀದಿ ಅಮೆಮಾರ್ ಖತೀಬ್ ಅಬೂಸ್ವಾಲಿಹ್ ಪೈಝಿ ಕಾರ್ಯಕ್ರಮದಲ್ಲಿ ದುವಾ ನೆರವೇರಿಸಿದರು, ಮಸೀದಿಯ ಅದ್ಯಕ್ಷ ಉಮರಬ್ಬ ಎ.ಎಸ್.ಬಿ, ಪ್ರಧಾನ ಕಾರ್ಯದರ್ಶಿ ಅಬುಸ್ವಾಲಿಹ್ ಉಸ್ತಾದ್, ಇಸ್ಮಾಯಿಲ್ ಫರಂಗಿಪೇಟೆ ಈ ಸಂದರ್ಭದಲ್ಲಿ ಮಾತನಾಡಿದರು.
ಪುದು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್, ರಿಯಾಝ್, ಪೈಝಲ್, ಮಸೀದಿ ಆದಳಿತ ಸಮಿತಿ ಸದಸ್ಯರಾದ ಇಬ್ರಾಹಿಮ್, ಮತ್ತು ಸಾದಿಖ್, ಹೈದರ್, ಹಾರಿಸ್, ಮತ್ತಿತರರು ಉಪಸ್ಥಿತರಿದ್ದರು.