ಅಕ್ರಮ ಮದ್ಯ ಸಾಗಾಟ: ಓರ್ವನ ಸೆರೆ
Update: 2018-05-26 18:16 IST
ಉಡುಪಿ, ಮೇ 26: ಬಾರಕೂರು ಶ್ರೀವೇಣು ಗೋಪಾಲಕೃಷ್ಣ ದೇವಸ್ಥಾನದ ಗೋಪುರದ ಬಳಿ ಮೇ 25ರಂದು ಸಂಜೆ ವೇಳೆ ಬೈಕ್‌ನಲ್ಲಿ ಅಕ್ರಮವಾಗಿ ಹೊರ ರಾಜ್ಯದ ಮದ್ಯ ಸಾಗಾಟ ಮಾಡುತ್ತಿದ್ದ ಓರ್ವನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಾರಕೂರು ಗ್ರಾಮದ ಕಚ್ಚೂರು ನಿವಾಸಿ ಚಂದ್ರ ಜೋಗಿ (42) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 4,473ರೂ. ಮೌಲ್ಯದ 18 ಮದ್ಯ ತುಂಬಿದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.