‘ಶಾಸನಗಳನ್ನು ರಾಜಕೀಯವಾಗಿ ನೋಡದೇ ಸಾಂಸ್ಕೃತಿಕವಾಗಿ ನೋಡಬೇಕು’

Update: 2018-05-26 14:04 GMT

ಉಡುಪಿ, ಮೇ 26: ಶಾಸನಗಳ ಅಧ್ಯಯನದಲ್ಲಿ ತೊಡಗಿರುವವರು ಶಾಸನಗಳನ್ನು ರಾಜಕೀಯವಾಗಿ ನೋಡದೇ ಸಾಂಸ್ಕೃತಿಕವಾಗಿ ನೋಡಬೇಕು ಎಂದು ಶಾಸನತಜ್ಞ, ವಿದ್ವಾಂಸ ಹಾಗೂ ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾದ್ಯಾಪಕ ಡಾ.ದೇವರಕೊಂಡಾರೆಡ್ಡಿ ಹೇಳಿದ್ದಾರೆ.

ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಇವುಗಳ ಜಂಟಿ ಆಶ್ರಯದಲ್ಲಿ ನೀಡಲಾದ 2018ನೇ ಸಾಲಿನ ‘ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿ’ ಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಶ್ರೀರಂಗಪಟ್ಟಣದ ಆಸುಪಾಸಿನಲ್ಲಿ ದೊರೆತ ಶಾಸನಗಳಲ್ಲಿ ಮುಸ್ಲಿಂರ ಉಲ್ಲೇಖ ಟಿಪ್ಪುಸುಲ್ತಾನನ ಕಾಲಕ್ಕಿಂತ ಎಷ್ಟೋ ಮೊದಲೇ ದೊರೆಯುತ್ತವೆ. ಆದುದರಿಂದ ರಾಜಕೀಯ ಬಿಟ್ಟು ಶಾಸನಗಳನ್ನು ಕೇವಲ ಸಾಂಸ್ಕೃತಿಕವಾಗಿ ನೋಡಿದಾಗ ನಮಗೆ ಬೇರೆಯೇ ವಿಷಯಗಳು ತಿಳಿಯುತ್ತವೆ ಎಂದು ಡಾ.ರೆಡ್ಡಿ ನುಡಿದರು.

ಇಂಡಿಯಲ್ಲಿ ದೊರೆತ ಸಿರಿದೇವಿ ಶಾಸನವೊಂದರಲ್ಲಿ ದೇವಗಿರಿ ಯಾದವರ ಕಾಲದ ಮಹಿಳೆಯೊಬ್ಬರು ಮಗುವಿಗಾಗಿ ಹಂಬಲಿಸಿ ಭೂರುಹನೊಂಪಿ ವೃತ ಮಾಡಿದ ಉಲ್ಲೇಖ ದೊರೆಯುತ್ತದೆ. ಈ ವ್ರತದಲ್ಲಿ ಮಹಿಳೆ ಭೂಮಿಯಲ್ಲಿ ವಿಶಾಲ ಜಾಗದಲ್ಲಿ ಗಿಡ-ಮರಗಳನ್ನು ನೆಟ್ಟು ಬೆಳೆಸಿ ಅದರಲ್ಲಿ ದೊರೆಯುವ ಹಣ್ಣುಹಂಪಲುಗಳನ್ನು ಜನರು ಬಳಸುವಂತಾಗುತ್ತದೆ. ಇದನ್ನು ತಿಳಿದ ರಾಜ ಮರಗಳ ಸಂರಕ್ಷಣೆಗೆ ಮುಂದಾಗುವುದು ಈ ಶಾಸನಗಳಿಂದ ತಿಳಿಯುತ್ತದೆ ಎಂದರು.

ಅದೇ ರೀತಿ ಕಾಸರಗೋಡು ಸಮೀಪದ ತಳಂಗೇರಿ ಶಾಸನದಲ್ಲಿ ಮಹಿಳೆಯೊಬ್ಬರು ಜೌಗುಪ್ರದೇಶವನ್ನು ದಾನವಾಗಿ ಪಡೆದು ಅದರಲ್ಲಿ ನಂದನವನ ಬೆಳೆಸಿದ ಉಲ್ಲೇಖ ದೊರೆಯುತ್ತದೆ. ನಮ್ಮಲ್ಲಿ ಜನರಿಗೆ ಶಾಸನಗಳ ಕುರಿತು ಸರಿಯಾದ ತಿಳುವಳಿಕೆ ಇಲ್ಲ. ಹೀಗಾಗಿ ಅವುಗಳ ಮಹತ್ವ ಅರಿಯದೇ ದಿನನಿತ್ಯದ ಬಳಕೆಗೆ ಬಳಸುತ್ತಿರುವುದು ದುರದೃಷ್ಟಕರ ಎಂದರು.

ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಪುತ್ತೂರಿನ ಡಾ. ಎಚ್.ಜಿ. ಶ್ರೀಧರ, ಜನಪ್ರಿಯತೆಯಿಂದ ವಿಮುಖವಾದ ಶಾಸನ ಅಧ್ಯಯನ ಕ್ಷೇತ್ರದಲ್ಲಿ ವಿದ್ವತ್ ಪೂರ್ಣವಾಗಿ, ಶಿಸ್ತುಬದ್ಧವಾಗಿ ಹಾಗೂ ತಾಳ್ಮೆಯಿಂದ ದೇವರಕೊಂಡಾ ರೆಡ್ಡಿ ಅವರು ಕಾರ್ಯ ನಿರ್ವಹಿಸಿದ್ದಾರೆ. ನಮ್ಮ ಪರಂಪರೆ-ಸಂಸ್ಕೃತಿಯ ಅಂತ:ಸತ್ವವನ್ನು ಅರಿಯುವ ಕಾರ್ಯ ಅವರಿಂದಾಗಿದೆ ಎಂದರು.

ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಪುತ್ತೂರಿನ ಡಾ. ಎಚ್.ಜಿ. ಶ್ರೀರ,ಜನಪ್ರಿಯತೆಯಿಂದವಿಮುಖವಾದಶಾಸನಅ್ಯಯನ ಕ್ಷೇತ್ರದಲ್ಲಿ ವಿದ್ವತ್ ಪೂರ್ಣವಾಗಿ, ಶಿಸ್ತುಬದ್ಧವಾಗಿ ಹಾಗೂ ತಾಳ್ಮೆಯಿಂದ ದೇವರಕೊಂಡಾ ರೆಡ್ಡಿ ಅವರು ಕಾರ್ಯ ನಿರ್ವಹಿಸಿದ್ದಾರೆ. ನಮ್ಮ ಪರಂಪರೆ-ಸಂಸ್ಕೃತಿಯ ಅಂತ:ಸತ್ವವನ್ನು ಅರಿಯುವ ಕಾರ್ಯ ಅವರಿಂದಾಗಿದೆ ಎಂದರು. ‘ಜೈನ ಧರ್ಮದಲ್ಲಿ ಭವಾವಳಿಯ ಪರಿಕಲ್ಪನೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಉಜಿರೆಯ ಉಪನ್ಯಾಸಕ ಡಾ. ಬಿ.ಪಿ. ಸಂಪತ್ ಕುಮಾರ್ ಮಾತನಾಡಿ, ಆತ್ಮ ಪರಮಾತ್ಮನಾಗುವ ಪರಿಕಲ್ಪನೆ ಜೈನಧರ್ಮದ್ದಾಗಿದೆ ಇದರಲ್ಲಿ ಕರ್ಮ ಸಿದ್ಧಾಂತ ಅತ್ಯಂತ ಪ್ರಮುಖವಾದುದು. ಜನ್ಮಾಂತರ ಹಾಗೂ ಪಾಪಪುಣ್ಯಗಳನ್ನು ಕರ್ಮವಾಗಿ ಪ್ರತಿಪಾದಿಸುತ್ತದೆ ಎಂಬುದನ್ನು ಪಂಪನ ಆದಿಪುರಾಣದಲ್ಲಿ ವ್ಯಕ್ತವಾಗಿರುವ ಭವಾವಳಿ ಪರಿಕಲ್ಪನೆಯ ಅನೇಕ ದೃಷ್ಟಾಂತ ಗಳ ಮೂಲಕ ವಿವರಿಸಿದರು.

‘ಜೈನ ಧರ್ಮದಲ್ಲಿವಾವಳಿಯ ಪರಿಕಲ್ಪನೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಉಜಿರೆಯ ಉಪನ್ಯಾಸಕ ಡಾ. ಬಿ.ಪಿ. ಸಂಪತ್ ಕುಮಾರ್ ಮಾತನಾಡಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಶ್ತಜೆ ಕೇಶವ ಭಟ್ಟರ ಪುತ್ರ ಟಿ.ಕೆ.ರಘುಪತಿ ಉಪಸ್ಥಿತರಿದ್ದರು.

ಕೇಶವ ಪ್ರಶಸ್ತಿ ಸಮಿತಿ ಸದಸ್ಯರಾದ ಪ್ರೊ. ತಾಳ್ತಜೆ ವಸಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿ, ಸುಶ್ಮಿತಾ ವಂದಿಸಿದರು. ಶರಿತಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಹಾಗೂ ಟಿ.ಕೆ ರಘುಪತಿ ಉಪಸ್ಥಿತರಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News