ಮೇ 27: ಬಿಗ್‌ಬಝಾರ್‌ನಲ್ಲಿ ರಮಝಾನ್ ವಿಶೇಷ ರಿಯಾಯಿತಿ
ಮಂಗಳೂರು, ಮೇ 26: ನಗರದ ಅತ್ತಾವರ ಹಾಗೂ ಬಿಜೈಯ ಬಿಗ್ ಬಝಾರ್‌ನಲ್ಲಿ ರಮಝಾನ್ ಪ್ರಯುಕ್ತ ಮೇ 27ರಂದು ಆಹಾರ ಪದಾರ್ಥಗಳು ಮತ್ತು ದಿನನಿತ್ಯ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ದರವನ್ನು ಘೋಷಿಸಲಾಗಿದೆ.
ಬಿಗ್‌ಬಝಾರ್‌ನಲ್ಲಿ ಆಲುಗಡ್ಡೆಗೆ 1 ಕೆಜಿಗೆ 29 ರೂ., ಈರುಳ್ಳಿ 16.90 ರೂ., ಬಾಳೆಹಣ್ಣು (ರೊಬೊಸ್ತಾ) 39 ರೂ., ಸೇಬುಹಣ್ಣು (ವಾಷಿಂಗ್‌ಟನ್) 159 ರೂ., ಮಾವಿನ ಹಣ್ಣು (ಬಂಗನಪಲ್ಲಿ) 59 ರೂ., ಸಕ್ಕರೆ 1 ಕೆಜಿಗೆ 30 ರೂ. ಗ್ರಾಹಕರಿಗೆ ದೊರೆಯಲಿದೆ.
ವಿಶೇಷ ಕೊಡುಗೆ: 5 ಕೆ.ಜಿ. ದಿಲ್‌ಕುಶ್ ಬಾಸ್ಮತಿ ಅಕ್ಕಿ, 5 ಲೀ. ಸನ್ ಪ್ರೀಮಿಯಂ ಸನ್ ಫ್ಲವರ್ ಎಣ್ಣೆ , 5 ಕೆ.ಜಿ. ಜಿ.ಎಚ್. ಸಕ್ಕರೆ ಕೇವಲ 786 ರೂ.ಗೆ ಲಭ್ಯವಿದೆ. ಕಾರ್ಮಿಕ್ ಗೋಡಂಬಿ 500 ಗ್ರಾಂ, ಕಾರ್ಮಿಕ್ ಬಾದಾಮ್ 500 ಗ್ರಾಂ ಖರೀದಿಯೊಂದಿಗೆ ಖರ್ಜೂರ 500 ಗ್ರಾಂನ ಮುಖಬೆಲೆ ರೂ. 205 ಆಗಿದ್ದು, ಇದೀಗ ರಮಝಾನ್ ಪ್ರಯುಕ್ತ ಕೇವಲ 99 ರೂ.ಗೆ ಲಭ್ಯವಿದೆ.
ದ್ರಾಕ್ಷಿ, ಗೋಡಂಬಿ, ಬಾದಾಮ್ ಪ್ರತೀ 100 ಗ್ರಾಂ ಪ್ಯಾಕೆಟ್ ಮುಖಬೆಲೆ 256 ರೂ.. ಆಗಿದ್ದು, ಇದೀಗ 219 ರೂ.ಗೆ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.