×
Ad

​ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ನೈತಿತೆ- ಕಾನೂನಿನ ಪಾತ್ರವಿಚಾರ ಗೋಷ್ಠಿ

Update: 2018-05-26 21:43 IST

ಮಂಗಳೂರು, ಮೇ 26: ಫಾದರ್ ಮುಲ್ಲಾರ್ ಕಾಲೇಜಿನ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ವತಿಯಿಂದ ‘ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ನೈತಿಕ ಮತ್ತು ಕಾನೂನಿನ ಪಾತ್ರ ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಕಾಲೇಜಿನ ನಾಲೆಡ್ಜ್ ಸೆಂಟರ್‌ನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಸಮಾರಂಭದಲ್ಲಿ ಸಂಘಟನಾ ಸಮಿತಿಯ ಅಧ್ಯಕ್ಷ ಯೆನೆಪೊಯ ಮೆಡಿಕಲ್ ಕಾಲೇಜಿನ ಮಾನಸಿಕ ಆರೋಗ್ಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಕಾಕುಂಜೆ ಭಾಗವಹಿಸಿ ಮಾತನಾಡುತ್ತಾ ವ್ಯಕ್ತಿಯ ಮಾನಸಿಕ ಆರೋಗ್ಯದಲ್ಲಿ ಸಾಮಾಜಿಕ ,ಆರ್ಥಿಕ ಹಾಗೂ ಕೌಟುಂಬಿಕ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಸಂದರ್ಭದಲ್ಲಿ ಮನೋರೋಗ ಚಿಕಿತ್ಸೆ ನೀಡುವ ತಜ್ಞರು ರೋಗಿಗೆ ಸಂಬಂದಿಸಿದ ನೈತಿಕ ವಿಚಾರಗಳು ಕಾನೂನಿನ ವಿಚಾರಗಳ ಬಗ್ಗೆ ಜ್ಞಾನ ಹೊಂದಿರಬೇಕಾಗಿರುವುದು ಅತೀ ಅಗತ್ಯ. ಇಲ್ಲದೆ ಹೋದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾನೂನು ಸವಾಲಾಗಿದ್ದರೂ ಅದನ್ನು ಪಾಲಿಸಬೇಕು ಮತ್ತು ಕಡ್ಡಾಯವಾಗಿ ವೃತ್ತಿಪರ ಮಾನಸಿಕ ಚಿಕಿತ್ಸಕರಿಗೆ ಈ ಅರಿವು ಮುಖ್ಯ ಎಂದರು.

ಫಾದರ್ ಮುಲ್ಲಾರ್ ಚ್ಯಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುಯೆಲ್ಲೊ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಪ್ರಥಮ ಗೋಷ್ಠಿಯನ್ನು ಫಾ.ಮುಲ್ಲಾರ್ ಕಾಲೇಜ್ ಆಸ್ಪತ್ರೆಯ ಮನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಫೀಖ್ ಎ.ಟಿ ಆರಂಭಿಸಿದರು. ಫಾ.ಮುಲ್ಲಾರ್ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹರೀಶ್ ಗೌಡ ಎರಡನೆ ಗೋಷ್ಠಿ ನಡೆಸಿದರು. ಕಾರ್ಯಕ್ರಮ ಸಂಘಟಕ ಪೊ.ಆ್ಯಗ್ನೆಸ್ ಇ.ಜಿ ಸ್ವಾಗತಿಸಿದರು, ರಾಜೀವ್ ಮ್ಯಾಥ್ಯು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News