×
Ad

ಮೋದಿ ಅಭಿಮಾನಿಯಿಂದ ರಿಕ್ಷಾ ಪ್ರಯಾಣ ದರ ಒಂದು ರೂ. !

Update: 2018-05-26 22:15 IST

ಕುಂದಾಪುರ, ಮೇ 26: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕುಂದಾಪುರದ ಹಂಗಳೂರಿನ ಆಟೋ ಚಾಲಕ ಸತೀಶ್ ಪ್ರಭು ಅಂಕದಕಟ್ಟೆ ತನ್ನ ರಿಕ್ಷಾದಲ್ಲಿ ಪ್ರಯಾಣಿಸುವವರಿಂದ 5 ಕಿ.ಮೀ. ವರೆಗೆ ಒಂದು ರೂ. ಮಾತ್ರ ಪಡೆದುಕೊಳ್ಳುತ್ತಿದ್ದಾರೆ.

ಅವರು ತನ್ನ ರಿಕ್ಷಾದ ಹಿಂಭಾಗದಲ್ಲಿ ರಿಕ್ಷಾ ಪ್ರಯಾಣ ದರ 5ಕಿಮೀ ವರೆಗೆ ಒಂದು ರೂ. ಮಾತ್ರ ಎಂಬ ಪೋಸ್ಟರ್‌ನ್ನು ಹಾಕಿದ್ದಾರೆ. ಕಳೆದ ನಾಲ್ಕು ವರ್ಷ ಗಳಿಂದಲೂ ಅವರು ಇದೇ ರೀತಿ ನಡೆಸಿಕೊಂಡು ಬರುತ್ತಿದ್ದು, ಈ ಮೂಲಕ ಅವರು ಮೋದಿಯವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News