×
Ad

ಮಂಗಳೂರು: ಲಂಗರು ಹಾಕಿದ್ದ ಬೋಟಿಗೆ ಹಾನಿ

Update: 2018-05-26 22:20 IST

ಮಂಗಳೂರು, ಮೇ 26: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ನಗರ ಹೊರವಲಯದ ಕಸಬಾ ಬೆಂಗರೆಯಲ್ಲಿ ಲಂಗರು ಹಾಕಿದ್ದ ಬೋಟು ಮುಳುಗಿ ಹಾನಿಯಾಗಿದೆ.

ರಮೇಶ್ ಪುತ್ರನ್ ಎಂಬವರಿಗೆ ಸೇರಿದ ಬೋಟು ಇದಾಗಿದೆ. ಬೀಸಿದ ಗಾಳಿಯ ರಭಸಕ್ಕೆ ಲಂಗರು ಹಾಕಿದ್ದ ಈ ದೋಣಿಯು ದಡಕ್ಕೆ ಬಡಿದು ಮುಳುಗಿದ ಪರಿಣಾಮ ಹಾನಿಯಾಗಿದೆ ಎನ್ನಲಾಗಿದೆ. ಇದರಿಂದ ಸುಮಾರು 1.50 ಲಕ್ಷ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News