ಮಳೆಗಾಲದ ಮುಂಜಾಗ್ರತೆ: ಸಾಲಿಗ್ರಾಮ ಪ.ಪಂ. ಸೂಚನೆ

Update: 2018-05-27 09:43 GMT

ಉಡುಪಿ, ಮೇ 27: ಜಿಲ್ಲೆಯಲ್ಲಿ ಮಳೆಗಾಲವು ಆರಂಭವಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೊಂದರೆಯಾಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸೂಚಿಸಿದೆ.

 ವ್ಯಾಪಾರಸ್ಥರು ಪ್ಲಾಸ್ಟಿಕ್‌ನ್ನು ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಚರಂಡಿಗೆ ಕಸಕಡ್ಡಿಗಳನ್ನು/ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡುವುದನ್ನು ನಿಷೇಧಿಸಲಾಗಿದೆ. ಗೂಡಂಗಡಿ ಮಾಲಕರು ಉಪಯೋಗಿಸಿದ ಎಳನೀರನ್ನು ಅದೇ ದಿನ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಅಂಗಡಿ ಮುಂಗಟ್ಟು ಮನೆ ಪರಿಸರದಲ್ಲಿ ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಹಾಗೂ ಯಾವುದೇ ರೀತಿಯಲ್ಲಿ ಸಾಂಕ್ರಾಮಿಕ ರೋಗವು ಉತ್ಪತ್ತಿಯಾಗದಂತೆ ಎಚ್ಚರ ವಹಿಸಲು ತಿಳಿಸಲಾಗಿದೆ.

ಮಾಮೂಲಿ ನೀರು ಹರಿಯುವುದಕ್ಕೆ ಎಲ್ಲರೂ ಅವಕಾಶ ಮಾಡಬೇಕೆಂದು ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.

ನಿಪಾಹ್ ವೈರಸ್ ಬಗ್ಗೆ ಎಚ್ಚರಿಕೆ

ನಿಪಾಹ್ ವೈರಸ್ ರೋಗದ ಬಗ್ಗೆ ಎಚ್ಚರ ವಹಿಸಬೇಕು. ಬಾವಲಿ ಅಥವಾ ಇತರ ಹಕ್ಕಿಗಳು ಕಚ್ಚಿದ ಗುರುತು ಕಂಡುಬಂದ ಮಾವು, ಹಲಸಿನ ಹಣ್ಣು, ಪೇರಲೆ ಹಣ್ಣು ಹಾಗೂ ಇತರ ಹಣ್ಣುಗಳನ್ನು ಸೇವಿಸಬಾರದು ಮತ್ತು ಯಾವುದೇ ಕಾರಣಕ್ಕೂ ಮಕ್ಕಳಿಗೆ ಅಂತಹ ಹಣ್ಣುಗಳನ್ನು ತಿನ್ನದಂತೆ ಎಚ್ಚರಿಕೆ ವಹಿಸಬೇಕು. ಆದ್ದರಿಂದ ನಾವು ಮತ್ತು ನಮ್ಮ ಕುಟುಂಬದವರು ಸುರಕ್ಷಿತರಾಗಿರಲು ಈ ಮುಂಜಾಗೃತ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News