×
Ad

ಕರ್ನಾಟಕ ಬಂದ್‌ಗೆ ಜಿಲ್ಲಾ ಬಿಜೆಪಿ ಬೆಂಬಲ: ಮಟ್ಟಾರ್

Update: 2018-05-27 19:39 IST

ಉಡುಪಿ, ಮೇ 27: ರೈತರ ಸಾಲಮನ್ನಾ ಮಾಡದ ರಾಜ್ಯ ಸರಕಾರದ ವಚನ ಭ್ರಷ್ಟತೆಯ ವಿರುದ್ಧ ರಾಜ್ಯಾದಾದ್ಯಂತ ರೈತರು ಮೇ 28ರಂದು ಕರೆ ನೀಡಿರುವ ರಾಜ್ಯ ಬಂದ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೋರಿಕೆಯಂತೆ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡುವುದಾಗಿ ಬಿಜೆಪಿ ಜಿಲ್ಲಾ ಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನಿಯೋಜಿತಗೊಂಡ ಕೂಡಲೇ ತನ್ನ ಮಾತಿನಿಂದ ಹಿಂದೆ ಸರಿದಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಅಸಾದ್ಯ, ತನಗೆ ರಾಜ್ಯದಲ್ಲಿ ಬಹುಮತ ಬಂದಿಲ್ಲ ಎಂಬುವುದಾಗಿ ಹೇಳುವ ಮೂಲಕ ತಾನು ವಚನಭೃಷ್ಟ ಎಂಬುದಾಗಿ ತೋರಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ವಾಹನ ಮಾಲಕರು, ಹೋಟೆಲ್ ಮಾಲಕರು, ಅಂಗಡಿ ಮಾಲಕರು ಇತ್ಯಾದಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡುವುದರ ಮೂಲಕ ಬಿಜೆಪಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News