ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯೋತ್ಸವ ಜಾಥ
ಮೂಡುಬಿದಿರೆ, ಮೇ. 27; ಮೂಡುಬಿದಿರೆ ನೂತನ ಶಾಸಕ, ವಿಧಾನಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರ ವಿಜಯೋತ್ಸವದ ವಾಹನ ಜಾಥವು ಮೂಡುಬಿದಿರೆ ವಿಧಾನಸಭಾ ಕ್ಷೇತ್ರಾದಾತ್ಯಂತ ರವಿವಾರ ನಡೆಯಿತು.
ವಿದ್ಯಾಗಿರಿಯ ಬಿಜೆಪಿ ಕಚೇರಿಯಲ್ಲಿ ಮುಂಭಾಗದಲ್ಲಿ ವಾಹನಜಾಥಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಮಾನಾಥ ಕೋಟ್ಯಾನ್, ಮೂಡುಬಿದಿರೆ ಕ್ಷೇತ್ರದ ಜನತೆ, ಬಿಜೆಪಿ ಪಕ್ಷ ನನ್ನನ್ನು ಶಾಸಕನನ್ನಾಗಿಸಿದರೆ. ಕಾರ್ಯಕರ್ತರೇ ನನ್ನ ಶಕ್ತಿ ಎಂದು ಹೇಳಿದರು.
ಮೂಡುಬಿದಿರೆ ನಗರ, ಶಿರ್ತಾಡಿ-ಹೌದಲ್, ಶಿರ್ತಾಡಿ ಪೇಟೆ, ಅಳಿಯೂರು, ದರೆಗುಡ್ಡೆ, ಬೆಳುವಾಯಿ, ಅಲಂಗಾರು, ಪುತ್ತಿಗೆ ಕೊಡ್ಯಡ್ಕ, ಕಡಂದಲೆ, ಕಿನ್ನಿಗೋಳಿ, ದಾಮಸ್ಕಟ್ಟೆ, ಮೂರು ಕಾವೇರಿ, ಕಿನ್ನಿಗೋಳಿ ಪೇಟೆ, ಎಸ್‌ಕೋಡಿ, ಪುನರೂರು, ಕೆರೆಕಾಡು, ಅಂಗಾರಗುಡ್ಡೆ, ಕಾರ್ನಾಡು, ಮೂಲ್ಕಿ ಪೇಟೆ, ಪಡುಪಣಂಬೂರು, ಹಳೆಯಂಗಡಿ, ಪಾವಂಜೆ, ಚೇಳ್ಯಾರು, ಶಿಬರೂರು, ಎಕ್ಕಾರು, ಪೆರ್ಮುದೆ, ಬಜ್ಪೆ ಪೇಟೆ, ಕಾರಂಬಾರು, ಮಳವೂರು, ಪಡುಶೆಡ್ಡೆ ಸಾಗಿ ಮೂಡುಶೆಡ್ಡೆ ಪರಿಸರದಲ್ಲಿ ವಾಹನಜಾಥ ಮೆರವಣಿಗೆ ಸಾಗಿತು.