ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು
Update: 2018-05-27 20:16 IST
ಬೆಳ್ತಂಗಡಿ, ಮೇ 27: ಸ್ನಾನಕ್ಕೆಂದು ನೇತ್ರಾವತಿ ನದಿಯಲ್ಲಿ ಇಳಿದಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಧರ್ಮಸ್ಥಳದ ಕೂರ್ದೊಟ್ಟು ಎಂಬಲ್ಲಿ ನಡೆದಿದೆ.
ಧರ್ಮಸ್ಥಳ ಕಟ್ಟದಬೈಲು ನಿವಾಸಿ ಲಕ್ಷ್ಮಣ ಗುಡಿಗಾರ್ ಪುತ್ರ ಡಿ. ಪ್ರಸನ್ನ ಗುಡಿಗಾರ್ (26) ಮೃತರು ಎಂದು ಗುರುತಿಸಲಾಗಿದೆ.
ಈತ ಹಾಗೂ ಗೆಳೆಯರು ಧರ್ಮಸ್ಥಳದ ಕೂರ್ದೊಟ್ಟು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಪ್ರಸನ್ನ ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ಮೂಡುಬಿದಿರೆಯ ಸಹಕಾರಿ ಸಂಘಗಳ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.