ಬದಿಯಡ್ಕ : ಸಿಡಿಲು ಬಡಿದು ಮಹಿಳೆಗೆ ಗಾಯ
Update: 2018-05-27 20:26 IST
ಕಾಸರಗೋಡು, ಮೇ 27: ಜಿಲ್ಲೆಯಾದ್ಯಂತ ರವಿವಾರ ಸಂಜೆ ಗುಡುಗು -ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಿದ್ದು, ಬದಿಯಡ್ಕದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಮಹಿಳೆಯೋರ್ವರು ಗಾಯಗೊಂಡಿದ್ದಾರೆ.
ಬದಿಯಡ್ಕ ಪೆರಡಾಲದ ರಾಮ ನಾಯ್ಕ್ ಎಂಬವರ ಮನೆಗೆ ಸಿಡಿಲು ಬಿಡಿದಿದ್ದು, ಅವರ ಪತ್ನಿ ಪುಷ್ಪಾ (50) ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿದ್ದ ಟಿವಿ ಸ್ಪೋಟಗೊಂಡಿದ್ದು, ವಿದ್ಯುತ್ ಉಪಕರಣಗಳು ಉರಿದಿವೆ. ಕಾಸರಗೋಡು ಜಿಲ್ಲೆಯಾದ್ಯಂತ ರವಿವಾರ ಸಂಜೆಯಿಂದ ಗುಡುಗು ಸಹಿತ ಸುರಿದ ಮಳೆಗೆ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದೆ.