×
Ad

ಶಾಂತಿಯುತ ಪ್ರತಿಭಟನೆಗೆ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಮನವಿ

Update: 2018-05-27 20:53 IST

ಬಂಟ್ವಾಳ, ಮೇ 27: ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಮೇ 28ರಂದು ರಾಜ್ಯ ಬಿಜೆಪಿ ನೇತಾರ ಬಿ.ಯಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಶಾಂತಿಯುತ ಪ್ರತಿಭಟನಾ ಬಂದ್ ಕರೆಗೆ ಕ್ಷೇತ್ರದ ಜನತೆ ಸ್ಪಂದಿಸಿ ಸಹಕರಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

ರೈತರ ಸಾಲಮನ್ನಾ ಘೋಷಣೆ ಮಾಡುವಂತೆ ಕೈಗೊಂಡಿರುವ ಈ ಬಂದ್‌ಗೆ ಜನತೆ ಶಾಂತಿಯುತವಾಗಿ ಬೆಂಬಲ ನೀಡಿದರೆ ಈ ದೇಶದ ಬೆನ್ನೆಲುಬಾಗಿರುವ ರೈತರಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News