×
Ad

2002ರ ಸುಲಿಗೆ ಪ್ರಕರಣ: ಅಬು ಸಲೇಂ ದೋಷಿ

Update: 2018-05-27 21:21 IST

ಹೊಸದಿಲ್ಲಿ, ಮೇ 27: ದಿಲ್ಲಿ ಮೂಲದ ಉದ್ಯಮಿಯೊಬ್ಬರಿಂದ 2002ರಲ್ಲಿ 5 ಕೋಟಿ ರೂ. ನೀಡುವಂತೆ ಬೇಡಿಕೆ ಒಡ್ಡಿದ್ದ ಪಾತಕಿ ಅಬು ಸಲೇಂನ್ನು ಇಲ್ಲಿನ ನ್ಯಾಯಾಲಯ ರವಿವಾರ ದೋಷಿ ಎಂದು ಪರಿಗಣಿಸಿದೆ.

ಹೆಚ್ಚುವರಿ ಸೆಷನ್ ನ್ಯಾಯಾಧೀಶ ತರುಣ್ ಸೆಹ್ರಾವತ್ ಅವರು ಅಪರಾಧ ಸಾಬೀತಾಗಿದೆ ಎಂದು ಹೇಳಿದ್ದಾರೆ ಹಾಗೂ ಶಿಕ್ಷೆಯ ಪ್ರಮಾಣ ಪ್ರಕಟಿಸಲು ವಿಚಾರಣೆ ದಿನಾಂಕವನ್ನು ಜುಲೈ 30ಕ್ಕೆ ಮುಂದೂಡಿದ್ದಾರೆ. ಆದಾಗ್ಯೂ, ನ್ಯಾಯಾಲಯ ಇತರ ಆರೋಪಿಗಳಾದ ಚಂಚಲ್ ಮೆಹ್ತಾ, ಮಜೀದ್ ಖಾನ್, ಪವನ್ ಕುಮಾರ್ ಮಿತ್ತಲ್ ಹಾಗೂ ಮುಹಮ್ಮದ್ ಅಶ್ರಫ್‌ರನ್ನು ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಳಿಸಿದೆ.

ಇವರಲ್ಲಿ ಓರ್ವ ಆರೋಪಿ ಸಜ್ಜನ್ ಕುಮಾರ್ ಸೋನಿ ವಿಚಾರಣೆ ವೇಳೆ ಮೃತಪಟ್ಟಿದ್ದ. ದಿಲ್ಲಿಯಲ್ಲಿ ಸಲೇಂ ಸುಲಿಗೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ದಕ್ಷಿಣ ದಿಲ್ಲಿಯ ಗ್ರೇಟರ್ ಕೈಲಾಸ್‌ನ ನಿವಾಸಿ ಹಾಗೂ ಉದ್ಯಮಿ ಅಶೋಕ್ ಗುಪ್ತಾ ಅವರಿಗೆ 2002ರಲ್ಲಿ 5 ಕೋಟಿ ರೂಪಾಯಿ ನೀಡುವಂತೆ ಸಲೇಂ ಬೆದರಿಕೆ ಒಡ್ಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News