×
Ad

ಡಾ.ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ 'ಪಟ್ಲ ಪ್ರಶಸ್ತಿ 2018'

Update: 2018-05-27 21:53 IST

ಮಂಗಳೂರು, ಮೇ 27: ಅಡ್ಯಾರ್ ಗಾರ್ಡ್‌ನ್‌ನಲ್ಲಿ ನಗರದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಮೂರನೆ ವರ್ಷದ ಪಟ್ಲ ಸಂಭ್ರಮ 2018 ಕಾರ್ಯಕ್ರಮದಲ್ಲಿಂದು ಯಕ್ಷಗಾನ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಡಾ.ಶಿಮಂತೂರು ನಾರಾಯಣ ಶೆಟ್ಟಿಯವರಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

*ಶಿಷ್ಯನ ಮೇಲಿನ ಪ್ರೀತಿಯಿಂದ ಪ್ರಶಸ್ತಿಯನ್ನು ಗೌರವದಿಂದ ಹಿಂದಿರುಗಿಸಿದ ಗುರು:- ಪಟ್ಲ ಸತೀಶ್ ತನ್ನ ಪ್ರೀತಿಯ ಶಿಷ್ಯ.ಆತ ಮಾಡುತ್ತಿರುವ ಕೆಲಸ ಮಹತ್ವದ್ದು. ನನ್ನನ್ನು ಈ ವೇದಿಕೆಯಲ್ಲಿ ಗೌರವಿಸಿರುವುದು ಸಂತಸವನ್ನುಂಟು ಮಾಡಿದೆ.ಶಿಷ್ಯನ ಕೆಲಸಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ. ಈ ಕೆಲಸ ಆತನಿಂದ ಇನ್ನೂ ಹೆಚ್ಚು ನಡೆಯಲಿ ಎಂದು ತನಗೆ ನೀಡಿದ ಪಟ್ಲ ಪ್ರಶಸ್ತಿಯ ಅಂಗವಾದ ಒಂದು ಲಕ್ಷ ರೂ ನಗದಿಗೆ 1008 ರೂ ಸೇರಿಸಿ ಫೌಂಡೇಶನ್ನಿಗೆ ಆ ಹಣವನ್ನು ಗೌರವದಿಂದ ಕೊಡುಗೆಯಾಗಿ ನೀಡುವುದಾಗಿ ಹಿಂತಿರುಗಿಸಿದರು. ಸಮಾರಂಭದಲ್ಲಿ 12 ಜನ ಅಶಕ್ತ ಕಲಾವಿದರಿಗೆ ಗೌರವ ಧನ ನೀಡಿ ಗೌರವಿಸಲಾಯಿತು.

ಯಕ್ಷ ಧ್ರುವ ಕಲಾ ಗೌರವವನ್ನು ಕುರಿಯ ಗಣಪತಿ ಶಾಸ್ತಿ , ಎಂ.ಕೆ .ರಮೇಶ್ ಆಚಾರ್ಯ, ಕುತ್ತೊಟ್ಟು ವಾಸು ಶೆಟ್ಟಿ,ಶೀಲಾ ಕೆ.ಶೆಟ್ಟಿ,ಅರ್ಗೋಡು ಮೋಹನ್ ದಾಸ್ ಶೆಣೈ, ಆನಂದ ಶೆಟ್ಟಿ ಐರ ಬೈಲು, ಪಾರೆಕೋಡಿ ಗಣಪತಿ ಭಟ್,ಮಹಾಲಕ್ಷ್ಮೀ ಡಿ.ರಾವ್ ಅವರಿಗೆ ನೀಡಿ ಗೌರವಿಸಲಾಯಿತು. ಒಡಿಯೂರು ಶ್ರೀಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆರ್ಶೀವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅಲ್‌ಕಾರ್ಗೋ ಸಮೂಹ ಸಂಸ್ಥೆಯ ಅಧ್ಯಕ್ಷ ಶಶಿಕಿರಣ ಶೆಟ್ಟಿ ವಹಿಸಿದ್ದರು. ಕಟೀಲು ಶ್ರೀ ಕ್ಷೇತ್ರದ ಅನುವಂಶೀಯ ಅರ್ಚಕರಾದ ಲಕ್ಷ್ಮೀ ನಾರಾಯಣ ಅಸ್ರಣ್ಣ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೆಶ್ ನಾಯ್ಕಿ , ಮಾಜಿ ಶಾಸಕ ಮೊಯ್ದಿನ್ ಬಾವ ,ಉದ್ಯಮಿ ಶಶಿಧರ ಶೆಟ್ಟಿ,ಕೆ.ಎಂ.ಶೆಟ್ಟಿ,ವಿವಿಧ ಘಟಕದ ಅಧ್ಯಕ್ಷರು ಪದಾಧಿಕಾರಿಗಳಾದ ಅಜಿತ್ ಶೆಟ್ಟಿ ಗುಜರಾತ್, ಸಂತೋಷ್ ಶೆಟ್ಟಿ ಪೂನಾ, ಸರ್ವೋತ್ತಮ ಶೆಟ್ಟಿ ದುಬೈ, ರೋಹಿತ್ ಶೆಟ್ಟಿ ಪೂನಾ, ಶಂಕರ ಶೆಟ್ಟಿ ಗುಜರಾತ್, ರಘು ಎಲ್ ಶೆಟ್ಟಿ ಬಡಗ ಬೆಳ್ಳೂರು ,ಎಸ್.ಕೆ.ಪುಜಾರಿ ಮಸ್ಕತ್,ವಸಂತ ಶೆಟ್ಟಿ ಬೆಳ್ಳಾರೆ,ದಿನೇಶ್ ವೈದ್ಯ, ಪ್ರವಿಣ್ ಶೆಟ್ಟಿ ಪೂನಾ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.

ತಾರಾ ಮೆರುಗು:- ಚಲನ ಚಿತ್ರ ನಟ ದರ್ಶನ್,ಯುವ ನಟ ಋಷಬ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ಪಟ್ಲ ಸಂಭ್ರಮಕ್ಕೆ ತಾರಾ ಮೆರುಗು ನೀಡಿದರು. ಪಟ್ಲ ಫೌಂಡೇಶನ್ನಿನ ಅಧ್ಯಕ್ಷ ಪಟ್ಲ ಸತೀಶ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ,ಭಾಸ್ಕರ ರೈ ಕುಕ್ಕುವಳ್ಳಿ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News