ಹೊಳೆಗೆ ಬಿದ್ದು ಮೃತ್ಯು
Update: 2018-05-27 21:59 IST
ಮಣಿಪಾಲ, ಮೇ 27: ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ 26ರಂದು ಸಂಜೆ ವೇಳೆ ಮರ್ಣೆ ಸಮೀಪದ ಕೊಜಪಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಮರ್ಣೆ ಗ್ರಾಮದ ಕೊಜಪಾಡಿ ನಿವಾಸಿ ಜಯಕರ ನಾಯ್ಕ್ (59) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ಕೊಜಪಾಡಿ ಹೊಳೆಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ ಬಳಿ ಮೀನು ಹಿಡಿಯಲೆಂದು ತೆರಳಿದ್ದು, ಅಲ್ಲಿ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.