ಹೊಸ್ಮಠ: ಹಳೆ ಸೇತುವೆ ರಸ್ತೆ ಕುಸಿತ

Update: 2018-05-28 04:42 GMT

ಕಡಬ, ಮೇ 28: ಇಲ್ಲಿನ ಹೊಸ್ಮಠ ಹಳೆ ಸೇತುವೆಯ ಬಳಿ ರಸ್ತೆ ಭಾಗಶಃ ಕುಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರದಲ್ಲಿ ತಡೆಯುಂಟಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಪ್ರತೀ ಮಳೆಗಾಲದಲ್ಲಿ ಮುಳುಗಡೆ ಸೇತುವೆ ಎಂದೇ ಪ್ರಚಲಿತದಲ್ಲಿರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಹೊಸ್ಮಠ ಹಳೆ ಸೇತುವೆ ಬಳಿ ಈ ಕುಸಿತ ಸಂಭವಿಸಿದೆ. ಮುಳುಗು ಸೇತುವೆಗೆ ಪರ್ಯಾಯವಾಗಿ ಅದರ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆ ಸೇತುವೆಯ ಬದಿಯಿಂದ ನೀರನ್ನು ಹೊರಹರಿಯಲು ಬಿಡಲಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಇಂದು ಮುಂಜಾನೆ ಸೇತುವೆ ಬಳಿ ರಸ್ತೆ ಕುಸಿದಿದೆ. ಬಳಿಕ ನೂತನ ಸೇತುವೆಯ ಗುತ್ತಿಗೆದಾರರು ಕುಸಿದ ಭಾಗಕ್ಕೆ ಹಿಟಾಚಿ ಮೂಲಕ ಕಲ್ಲುಗಳನ್ನು ಹಾಸಿ ಸುಗಮಕ್ಕೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News