ಬಿಜೆಡಿಗೆ ಸಂಸದ ಪಾಂಡಾ ರಾಜೀನಾಮೆ
Update: 2018-05-28 17:27 IST
ಭುವನೇಶ್ವರ,ಮೇ 28: ಒಡಿಶಾದ ಕೇಂದ್ರಪಾಡಾ ಲೋಕಸಭಾ ಕ್ಷೇತ್ರದ ಸಂಸದ ವೈಜಯಂತ ಪಾಂಡಾ ಅವರು ಸೋಮವಾರ ಬಿಜು ಜನತಾ ದಳ(ಬಿಜೆಡಿ)ಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.
ಫೆರೋ ಅಲಾಯ್ ಉತ್ಪಾದಿಸುವ ಐಎಂಎಫ್‌ಎ ಕಂಪನಿಯ ಉಪಾಧ್ಯಕ್ಷರಾಗಿರುವ ಪಾಂಡಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಜ.24ರಂದು ಬಿಜೆಡಿಯಿಂದ ಅಮಾನತುಗೊಳಿಸಲಾಗಿತ್ತು.
2000-2006 ಮತ್ತು 2006-2009ರ ಅವಧಿಗಳಲ್ಲಿ ಬಿಜೆಡಿಯ ರಾಜ್ಯಸಭಾ ಸದಸ್ಯರಾಗಿದ್ದ ಅವರು 2009 ಮತ್ತು 2014ರಲ್ಲಿ ಕೇಂದ್ರಪಾಡಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಪಾಂಡಾರ ತಂದೆ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಬನ್ಸಿಧರ ಪಾಂಡಾ ಅವರು ಮೇ 22ರಂದು ಭುವನೇಶ್ವರದಲ್ಲಿ ನಿಧನರಾಗಿದ್ದರು. ಮುಖ್ಯಮಂತ್ರಿ ಹಾಗೂ ಬಿಜೆಡಿ ಅಧ್ಯಕ್ಷ ನವೀನ ಪಟ್ನಾಯಕ್ ಅವರು ಪಾಂಡಾರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದರಾದರೂ ಅಂತಿಮ ಗೌರವಗಳನ್ನು ಸಲ್ಲಿಸಲು ಅವರ ನಿವಾಸಕ್ಕೆ ಭೇಟಿ ನೀಡಿರಲಿಲ್ಲ.