ಇಂದ್ರಾಳಿ ರೈಲ್ವೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ: ರಘುಪತಿ ಭಟ್
ಉಡುಪಿ, ಮೇ 28: ಇಂದ್ರಾಳಿ ರೈಲ್ವೆ ಸೇತುವೆ ನಿರ್ಮಾಣ ಕಾರ್ಯ ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಕಾಮಗಾರಿಗೆ ಕೂಡಲೇ ಚಾಲನೆ ಕೊಡುವ ಕುರಿತು ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ರೈಲ್ವೆ ಯಾತ್ರಿ ಸಂಘದ 2017-18ರ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ರವಿವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾ ಡುತಿದ್ದರು. ಈ ರಸ್ತೆಯು ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದ್ದು ಕೇಂದ್ರ ಸರಕಾರ ತೀರ್ಥಹಳ್ಳಿಯಿಂದ ಮಲ್ಪೆಯವರೆಗಿನ ಅಭಿವೃದ್ಧಿ ಕಾಮಗಾರಿಗೆ 678 ಕೋಟಿ ರೂ. ಅನುದಾನ ಒದಗಿಸಿದೆ. ರೈಲ್ವೆ ಇಲಾಖೆಯ ಜೊತೆ ಸಮನ್ವಯತೆಯಿಂದ ಸೇತುವೆ ಕಾಮಗಾರಿಗೆ ಶೀಘ್ರದಲ್ಲಿ ಪುನರ್ಜೀವ ನೀಡ ಲಾಗುವುದು ಎಂದು ಭರವಸೆ ನೀಡಿದರು.
ರೈಲ್ವೆ ಯಾತ್ರಿ ಸಂಘದ ಹಲವು ಬೇಡಿಕೆಗಳ ಜೊತೆಗೆ ಉಡುಪಿಯ ಸರ್ವ ತೋಮುಖ ಅಭಿವೃದ್ಧಿಗೆ ಬದ್ಧನಾಗಿದ್ದು, ವಿಭಾಗೀಯ ರೈಲ್ವೆ ಸಲಹಾ ಸಮಿತಿಗೆ ಯೋಗ್ಯ ಸದಸ್ಯರನ್ನು ಉಡುಪಿಯಿಂದ ಪ್ರತಿನಿಧಿಯಾಗಿ ಶಿಫಾರಸು ಮಾಡಿ ಈ ಭಾಗದ ರೈಲ್ವೆ ಅಭಿವೃದ್ಧಿಗೆ ಮತ್ತಷ್ಟು ವೇಗವನ್ನು ನೀಡಲು ಸಹಕರಿಸಲಿದ್ದೇನೆ ಎಂದು ಅವರು ತಿಳಿಸಿದರು.
ಸಂಘದ ಅಧ್ಯಕ್ಷ ಆರ್.ಎಲ್.ಡಾಯಸ್ ಮಾತನಾಡಿ, ಉಡುಪಿ ರೈಲ್ವೆ ಯಾತ್ರಿ ಸಂಘ ಹಲವು ಹೊಸ ರೈಲುಗಳ ಮತ್ತು ರೈಲು ಮಾರ್ಗಗಳ ಪ್ರಸ್ತಾವನೆ ಯನ್ನು ವೇಳಾಪಟ್ಟಿಯ ಜೊತೆಗೆ ರೈಲ್ವೆ ಇಲಾಖೆಗೆ ಸಲ್ಲಿಸಿದೆ. ಸಾಕಷ್ಟು ಮನವಿ ಗಳು ಫಲಪ್ರದವಾಗಿವೆ ಹಾಗು ಕೆಲವು ಬೇಡಿಕೆಗಳಿಗೆ ಕೋರ್ಟ್ ಮೆಟ್ಟಲನ್ನೇರಿದೆ. ಇನ್ನು ಕೆಲವು ಬಾಕಿ ಇವೆ. ನಮ್ಮ ಹೋರಾಟ ನಿರಂತರವಾಗಿ ಮುಂದುವರೆ ಯುತ್ತದೆ ಎಂದರು.
ಈ ಸಂದರ್ಭದಲ್ಲಿ ನೂತನ ಶಾಸಕ ಕೆ.ರಘುಪತಿ ಭಟ್ ರವರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು. ಮುಂಬೈ ರೈಲ್ವೆ ಯಾತ್ರಿ ಸಂಘದ ಪ್ರಧಾನ ಕಾರ್ಯದರ್ಶಿ ಆಲಿವರ್ ಡಿಸೋಜ, ಉಡುಪಿ ಸಂಘದ ಉಪಾಧ್ಯಕ್ಷ ಆರ್. ಮಂಜ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ಕೆ.ರಾಮಚಂದ್ರ ಆಚಾರ್ಯ ಲೆಕ್ಕಪತ್ರದ ವರದಿ ಯನ್ನು ವಾಚಿಸಿದರು. ನಿರ್ದೇಶಕರುಗಳಾದ ಜಾನ್ ರೆಬೆಲ್ಲೊ, ಅಜಿತ್ ಶೆಣೈ, ಸದಾನಂದ ಅಮೀನ್, ಸುಂದರ್ ಕೋಟಿಯನ್ ಉಪಸ್ಥಿತರಿದ್ದರು. ನಿರ್ದೇಶಕ ಜನಾದರ್ನ್ ಕೋಟಿಯನ್ ಸ್ವಾಗತಿಸಿದರು. ಶೇಖರ್ ಕೋಟಿ ಯನ್ ವಂದಿಸಿದರು. ಪ್ರಭಾಕರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ರೈಲು ವಿಳಂಬವಾದರೆ ಟಿಕೆಟ್ ದರ ವಾಪಾಸ್ಸು !
ಎಕ್ಸ್‌ಪ್ರೆಸ್ ರೈಲುಗಳು ನಿಲ್ದಾಣಕ್ಕೆ ನಿಗದಿತ ಸಮಯಕ್ಕಿಂತ ಮೂರು ಗಂಟೆ ಅಥವಾ ಅದಕ್ಕಿಂತ ಹೆಚ್ಚು ತಡವಾಗಿ ತಲುಪಿದಲ್ಲಿ ಪ್ರಯಾಣಿಕರು ತಾವು ಕೊಟ್ಟ ಟಿಕೆಟ್ ದರವನ್ನು ಕೂಡಲೇ ಅದೇ ನಿಲ್ದಾಣದ ಕೌಂಟರ್‌ನಲ್ಲಿ ಹಿಂಪಡೆಯಲು ಅವಕಾಶವಿದೆ ಎಂದು ಮುಂಬೈ ರೈಲ್ವೆ ಯಾತ್ರಿ ಸಂಘದ ಪ್ರಧಾನ ಕಾರ್ಯದರ್ಶಿ ಆಲಿವರ್ ಡಿಸೋಜ ತಿಳಿಸಿದರು.ರಿಸೆರ್ವಶನ್ ಪಡೆದು ಪ್ರಯಾಣಿಸುವ ಪ್ರಯಾಣಿಕರ ಭೋಗಿಗಳ ಸೀಟುಗಳ ಮಧ್ಯೆ ಇರುವ ಜಾಗದಲ್ಲಿ, ಶೌಚಾಲಯ ಬಳಿಯ ಸ್ಥಳದಲ್ಲಿ ರಿಸೆರ್ವಶನ್ ಇಲ್ಲದ ಪ್ರಯಾಣಿಕರು ಮಲಗಿದ್ದು ಕಂಡಲ್ಲಿ ಅದನ್ನು ದಾಖಲೆ ಸಮೇತ ಬಳಕೆದಾರರ ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಅವ ಕಾಶ ಇದೆ. ಇದಕ್ಕೆ ರೈಲ್ವೆಯ ಇಲಾಖೆ ಸುಮಾರು 30ಸಾವಿರ ರೂ. ವರೆಗೆ ದಂಡ ಭರಿಸಲು ಬದ್ಧವಾಗುತ್ತದೆ ಎಂದರು.