ಮಾನಸ ಸರೋವರದಲ್ಲಿ ತೀರ್ಥಸ್ನಾನ ಮಾಡಲು ಚೀನಾ ಅಧಿಕಾರಿಗಳು ಅನುಮತಿಸುತ್ತಿಲ್ಲ: ಯಾತ್ರಿಗಳ ದೂರು

Update: 2018-05-28 12:21 GMT

ಹೊಸದಿಲ್ಲಿ, ಮೇ 28: ಮಾನಸ ಸರೋವರದಲ್ಲಿ ತೀರ್ಥಸ್ನಾನ ಮಾಡಲು ಚೀನೀ ಅಧಿಕಾರಿಗಳು ತಮಗೆ ಅನುಮತಿಸುತ್ತಿಲ್ಲ ಎಂದು ಕೆಲ ಯಾತ್ರಿಗಳು ದೂರಿದ್ದಾರೆ.

ಡೋಕ್ಲಂ ಸಮಸ್ಯೆಯ ನಂತರ ಬೀಜಿಂಗ್  ಸ್ಥಗಿತಗೊಳಿಸಿದ್ದ ಕೈಲಾಸ-ಮಾನಸಸರೋವರ ಯಾತ್ರೆಗಾಗಿ ನಾಥು ಲಾ ಪಾಸ್ ಮತ್ತೆ ತೆರೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಆರೋಪ ಕೇಳಿ ಬಂದಿದೆ. ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಈ ತಿಂಗಳು ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭ ಸುಷ್ಮಾ ಈ ಘೋಷಣೆ ಮಾಡಿದ್ದರು.

"60 ಯಾತ್ರಾರ್ಥಿಗಳ 18 ತಂಡಗಳನ್ನು ಲಿಪುಲೆಖ್ ಪಾಸ್ ಮೂಲಕ ಹಾಗೂ ತಲಾ 50 ಯಾತ್ರಿಗಳ 10 ತಂಡಗಳನ್ನು ನಾಥು ಲಾ ಪಾಸ್ ಮೂಲಕ ಕಳುಹಿಸಲಾಗುವುದು. ಈ ವರ್ಷ 1,580 ಯಾತ್ರಿಗಳು ಕೈಲಾಸ-ಮಾನಸಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ,'' ಎಂದು ಸಚಿವೆ ಹೇಲಿದ್ದರು. ನಾಥು ಲಾ ಪಾಸ್ ದಾಟಿದ ನಂತರ ಯಾತ್ರಿಗಳನ್ನು ಚೀನಾ ಸಾರಿಗೆ ಮುಖಾಂತರ ಕೈಲಾಸ ಮಾನಸಸರೋವರಕ್ಕೆ ಸಾಗಿಸಲಾಗುತ್ತದೆ. ಪ್ರತಿ ವರ್ಷ ಈ ಯಾತ್ರೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚೀನಾದ ಸಹಕಾರದೊಂದಿಗೆ ಜೂನ್-ಸೆಪ್ಟೆಂಬರ್ ನಡುವೆ ಆಯೋಜಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News