×
Ad

ಕಾಸರಗೋಡು: ಮಲಯಾಳ ಕಡ್ಡಾಯ ಆದೇಶದ ವಿರುದ್ಧ ಕನ್ನಡ ಹೋರಾಟ ಸಮಿತಿಯಿಂದ ಧರಣಿ

Update: 2018-05-28 18:08 IST

ಕಾಸರಗೋಡು, ಮೇ 28:  ಮಲಯಾಳ ಕಡ್ಡಾಯ ಆದೇಶದ  ವಿರುದ್ಧ  ಕನ್ನಡ ಹೋರಾಟ ಸಮಿತಿ  ವತಿಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ನಡೆಯುತ್ತಿರುವ  ಧರಣಿ ಮತ್ತು ಸಹಿ ಸಂಗ್ರಹ ಅಭಿಯಾನ ಸೋಮವಾರ ಆರನೇ ದಿನಕ್ಕೆ ಕಾಲಿಟ್ಟಿದ್ದು , ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಸೋಮವಾರ  ಸಿರಿ ಚಂದನ ಕನ್ನಡ ಯುವ ಬಳಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು. 

ಆರನೇ ದಿನದ ಪ್ರತಿಭಟನೆಯನ್ನು ಕನ್ನಡ ಹೋರಾಟ ಗಾರ  ಬಿ . ಪುರುಷೋತ್ತಮ ಉದ್ಘಾಟಿಸಿದರು. ಹೋರಾಟ ಸಮಿತಿ ಸಂಚಾಲಕ ನ್ಯಾಯವಾದಿ ಮುರಳೀಧರ ಬಳ್ಳುಕ್ಕರಾಯ, ಅಡೂರು ಉಮೇಶ್ ನಾಯ್ಕ್ , ರಾಧಾಕೃಷ್ಣ ಉಳಿಯತ್ತಡ್ಕ ,  ತಾರಾನಾಥ ಮಧೂರು , ಪ್ರೊ. ಎ . ಶ್ರೀನಾಥ್ , ಸಿರಿಚಂದನ ಕನ್ನಡ ಯುವ ಬಳಗದ  ಅಧ್ಯಕ್ಷ ರಕ್ಷಿತ್  ಪಿ .ಎಸ್ , ಉಪಾಧ್ಯಕ್ಷ  ಪ್ರಶಾಂತ್ ಹೊಳ್ಳ ,  ಕಾರ್ಯದರ್ಶಿ   ರಾಜೇಶ್ ಎಸ್ .ಪಿ , ಸೌಮ್ಯ ಪ್ರಸಾದ್ ,  ಸ್ವಾತಿ ಸರಳಿ,  ಶ್ರದ್ದಾ ಭಟ್  ನಾಯರ್ಪಳ್ಳ, ಸ್ವಾತಿ ,  ವಿಶಾಲಾಕ್ಷಿ  ಸುಜಿತ್ ಉಪ್ಪಳ , ಮೇಘಶ್ರೀ , ಸುಜಾತಾ ಸಿ ಎಚ್ ಮೊದಲಾದವರು ನೇತೃತ್ವ ನೀಡಿದರು.  

ಕಾಸರಗೋಡು ಸರಕಾರಿ ಕಾಲೇಜಿನ  ಸ್ನೇಹರಂಗ ,  ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಗಿಳಿವಿಂಡು ,  ವಿದ್ಯಾನಗರ ಚಾಲದ  ಬಿ. ಎಡ್ ಕಾಲೇಜಿನ  ವಿದ್ಯಾರ್ಥಿಗಳು , ಮಾಯಿಪ್ಪಾಡಿ ಡಯಟ್ ವಿದ್ಯಾರ್ಥಿಗಳು , ಸ್ನಾತಕೋತ್ತರ ವಿದ್ಯಾರ್ಥಿಗಳು , ಕಾಸರಗೋಡು ಸರಕಾರಿ ಕಾಲೇಜಿನ  ಎಂ . ಫಿಲ್ , ಪಿ . ಎಚ್ ಡಿ,  ಸಂಶೋಧನಾ  ವಿದ್ಯಾರ್ಥಿಗಳು  ಧರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶಿಸಿದರು.

ಮೇ 23 ರಿಂದ  ಕಾಸರಗೋಡು ಹೊಸಬಸ್ಸು ನಿಲ್ದಾಣ ಪರಿಸರದಲ್ಲಿ ಆರಂಭಗೊಂಡ ಧರಣಿ ಯಲ್ಲಿ ಈಗಾಗಲೇ ಹಲವಾರು ಮಂದಿ ಭಾಗಿಯಾಗಿದ್ದು , ಹಲವು ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ . ವಿವಿಧ ಪಕ್ಷದ ಪ್ರತಿನಿಧಿಗಳು , ಕನ್ನಡ ಹೋರಾಟಗಾರರು  ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದ್ದಾರೆ. ಧರಣಿ  ಮಂಗಳವಾರ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News