ಉಡುಪಿ; ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಧರ್ಮಗುರುಗಳಾಗಿ ವ.ಲೋರೆನ್ಸ್ ಡಿಸೋಜ ಅಧಿಕಾರ ಸ್ವೀಕಾರ
ಉಡುಪಿ, ಮೇ 28: ಉಡುಪಿ ಧರ್ಮಪ್ರಾಂತದ ಪ್ರಧಾನ ದೇವಾಲಯ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ನೂತನ ಪ್ರಧಾನ ಧರ್ಮಗುರು ಗಳಾಗಿ ಉಡುಪಿ ಕೆಥೊಲಿಕ್ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ವಂ. ಡಾ.ಲೊರೆನ್ಸ್ ಡಿಸೋಜ ಸೋಮವಾರ ಅಧಿಕಾರ ಸ್ವೀಕರಿಸಿದರು.
ಉಡುಪಿ ಧರ್ಮಾಧ್ಯಕ್ಷರ ಪ್ರತಿನಿಧಿಯಾಗಿ ಧರ್ಮಪ್ರಾಂತದ ಕುಲಪತಿ ಹಾಗೂ ಉಡುಪ ಶೋಕ ಮಾತಾ ಇಗರ್ಜಿಯ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ ಅಧಿಕಾರ ಹಸ್ತಾಂತರದ ಧಾರ್ಮಿಕ ವಿಧಿವಿಧಾನ ಗಳನ್ನು ನೆರವೇರಿಸಿದರು. ನೂತನ ಧರ್ಮಗುರುಗಳಿಗೆ ಪವಿತ್ರ ಬೈಬಲ್, ಚರ್ಚಿನ ಆಡಳಿತ ಸಂಬಂಧಿ ಲೆಕ್ಕಪುಸ್ತಕಗಳು ಹಾಗೂ ಚರ್ಚಿನ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಮೂಡುಬೆಳ್ಳೆ ಚರ್ಚಿನ ವಂ.ಕ್ಲೆಮಂಟ್ ಮಸ್ಕರೇನ್ಹಸ್, ಧರ್ಮಪ್ರಾಂತ್ಯದ ಎಸ್ಟೆಟ್ ಮ್ಯಾನೇಜರ್ ವಂ.ಹೆನ್ರಿ ಮಸ್ಕರೇನ್ಹಸ್, ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ನಿರ್ಗಮನ ಧರ್ಮಗುರು ವಂ.ಸ್ಟ್ಯಾನಿ ಬಿ.ಲೋಬೊ, ಸಹಾಯಕ ಧರ್ಮಗುರು ವಂ.ರೊಲ್ವೀನ್ ಆರಾನ್ಹಾ, ಅತಿಥಿ ಧರ್ಮಗುರು ಗಳಾದ ವಂ.ರೋಯ್ಸನ್ ಫೆರ್ನಾಂಡಿಸ್, ವಂ.ವಿಜಯ್ ಡಿಸೋಜ, ವಂ. ವಿನ್ಸೆಂಟ್ ಕುವೆಲ್ಲೊ, ವಂ.ರೊನ್ಸನ್, ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಡಾ.ನೇರಿ ಕರ್ನೇಲಿಯೊೀ ಮೊದಲಾದವರು ಉಪಸ್ಥಿತರಿದ್ದರು.
ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ನಿರ್ಗಮನ ಧರ್ಮಗುರು ವಂ.ಸ್ಟ್ಯಾನಿ ಬಿ ಲೋಬೊ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಧರ್ಮಗುರು ಗಳಾಗಿ ವರ್ಗಾವಣೆಗೊಂಡಿದ್ದು, ಹೆಚ್ಚುವರಿಯಾಗಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಸಹಾಯಕ ಧರ್ಮಗುರುಗಳಾಗಿದ್ದ ವಂ. ರೊಲ್ವೀನ್ ಆರಾನ್ಹಾ ಉದ್ಯಾವರ ಚರ್ಚಿನ ಸಹಾಯಕ ಧಮರ್ಗುರುವಾಗಿ ವರ್ಗಾವಣೆಗೊಂಡಿದ್ದಾರೆ.