ಜಾಗತಿಕ ಗುಣಮಟ್ಟದ ಕೌಶಲ್ಯ ಗಳಿಸಿ: ಜಿಲ್ಲಾಧಿಕಾರಿ ಪ್ರಿಯಾಂಕ
ಉಡುಪಿ, ಮೇ 28: ಜಾಗತೀಕರಣದ ಇಂದಿನ ಕಾಲಘಟ್ಟದಲ್ಲಿ ಯುವ ಜನತೆ ಇಂಗ್ಲೀಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುವ ಸಂವಹನ ಕೌಶಲ್ಯವನ್ನು ಗಳಿಸಿಕೊಳ್ಳುವುದರೊಂದಿಗೆ ತಮ್ಮನ್ನು ಜಾಗತಿಕ ಮಟ್ಟಕ್ಕೆ ಏರಿಸಿ ಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಹೇಳಿದದಾರೆ.
ಉಡುಪಿ ಜಿಲ್ಲಾಡಳಿತ ಮತ್ತು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಜಂಟಿ ಸಹಯೋಗದೊಂದಿಗೆ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರವಿವಾರ ದಿ ಹಿಂದೂ ಪತ್ರಿಕಾ ಬಳಗದಿಂದ ಆಯೋಜಿಸಲಾದ 40 ಗಂಟೆಗಳ ಸ್ಟ್ಯಾಂಡರ್‌ಡ್ಸ್‌ಡ್ ಟೆಸ್ಟ್ ಆಫ್ ಇಂಗ್ಲೀಷ್ ಪ್ರೊಫೀಶಿಯೆನ್ಸಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಜಿ.ಶಂಕರ್, ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್., ಕಾರ್ಯ ಕ್ರಮ ಸಂಯೋಜಕ ಡಾ.ಬಿ.ಎಂ.ಚಂದ್ರಶೇಖರ, ಸರಿತಾ ಸಂತೋಷ್, ತರಬೇತುದಾರರಾದ ಅಂಜಲಿ, ವೈಜಯಂತಿ ಉಪಸ್ಥಿತರಿದ್ದರು.