ಹೆಜಮಾಡಿ ಅಲ್ -ಅಝ್‌ಹರ್ ಶಾಲೆಯಲ್ಲಿ ಆಕರ್ಷಕ ಪ್ರಾರಂಭೋತ್ಸವ
Update: 2018-05-28 21:53 IST
ಮಂಗಳೂರು, ಮೇ 28: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹೆಜಮಾಡಿಯ ಅಲ್-ಅಝ್‌ಹರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಂದು ಆಕರ್ಷಕವಾಗಿ ನಡೆಯಿತು.ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ ಕೆ.ಜಿ ವಿಭಾಗದ ಮಕ್ಕಳಿಗೆ ಸಿಹಿ ತಿಂಡಿ ಹಂಚುವ ಮೂಲಕ ಪ್ರಾರಂಭೋತ್ಸವ ನಡೆಯಿತು.
ಸಮಾರಂಭದಲ್ಲಿ ಕನ್ನಂಗಾರ್ ತ್ವಾಹ ಮಸೀದಿಯ ಇಮಾಮರಾದ ಮುಹಮ್ಮದ್ ರಫೀಕ್ ಸಖಾಫಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.ಇದೇ ಸಂದರ್ಭದಲ್ಲಿ 2017-18ನೆ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಫರ್ಹಾನಾ,ಮಿನಾಝ್,ಫಾತಿಮರನ್ನು ಶಾಲಾ ಸಂಚಾಲಕ ಹಾಜಿ ಶೇಖಬ್ಬ ಕೆ.ಎಸ್ ಅಭಿನಂದಿಸಿದರು.ಕಾರ್ಯದರ್ಶಿ ಎಂ.ಐ.ಮುಹಮ್ಮದ್, ಪ್ರಾಂಶುಪಾಲ ಐ.ಕ್ರಿಸ್ಟೋಫರ್ ಕೊಟ್ಯಾನ್,ಪಿ.ಟಿ.ಎ ಅಧ್ಯಕ್ಷ ಅಬ್ದುಲ್ ಖಾದರ್ ,ಆಡಳಿತ ಮಂಡಳಿಯ ಇತರ ಸದಸ್ಯರಾದ ಅಬ್ದುಲ್ ರಝಾಕ್, ಹಂಝ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.