×
Ad

ವೈದ್ಯಕೀಯ ಚಿಕಿತ್ಸೆಯ ನೆರವಿಗೆ ಮನವಿ

Update: 2018-05-28 22:09 IST

ಮಂಗಳೂರು, ಮೇ  28: ಶಿಬರೂರಿನ ಕಲ್ಲಾಟ ಎಂಬಲ್ಲಿ ತನ್ನ ಪತಿ ವಾಸು ಪೂಜಾರಿ ಹಾಗೂ ಓರ್ವ ಮಗನೊಂದಿಗೆ ವಾಸವಾಗಿರುವ ಇಂದಿರಾ ಕಳೆದ ಕೆಲವು ವರ್ಷಗಳಿಂದ ಅಸೌಖ್ಯಕ್ಕೆ ಈಡಾಗಿ ಎರಡು ಬಾರಿ ಶಸ್ತ್ರ ಚಿಕಿತ್ಸೆ ಒಳಗಾದರೂ ಇನ್ನೂ ಚೇತರಿಸಿಕೊಂಡಿಲ್ಲ .ಇದೀಗ ಮೂರನೆ ಬಾರಿಗೆ ತಲೆಯ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದಾರೆ.

ಹಿಂದಿನ ಚಿಕಿತ್ಸೆಗೆ ಹಣ ಹೊಂದಿಸಲು ಸಂಕಷ್ಟಪಟ್ಟ ಕುಟುಂಬ ಇದೀಗ ಸುಮಾರು 5 ಲಕ್ಷ ವೆಚ್ಚದ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲಾಗದ ಸ್ಥಿತಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಚಿಕಿತ್ಸೆಗಾಗಿ ನೆರವು ನೀಡಲು ಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಮತ್ತು ಅವರ ಸಂಪರ್ಕ ವಿಳಾಸ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಎಸ್.ಬಿ ಖಾತೆ ಸಂಖ್ಯೆ 111401011000168 ಐಎಫ್‌ಸಿ ಕೋಡ್ ವಿಐಜೆಬಿ0001114(ಸಂಪರ್ಕ ವಿಳಾಸ ವಾಸು ಪೂಜಾರಿ 1-9ಕಲ್ಲಟ್ಟ ಮನೆ,ತೆಂಕ ಎಕ್ಕೂರು ಗ್ರಾಮ,ಯೆಕ್ಕೂರು ಅಂಚೆ,,ಕಟೀಲು.ಮಂಗಳೂರು ತಾಲೂಕು ದ.ಕ-ಪಿನ್.574509)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News