ಮಂಗಳೂರು: ಸಿಡಿಲಿಗೆ ಮಗು ಬಲಿ
Update: 2018-05-28 22:21 IST
ಮಂಗಳೂರು, ಮೇ 28: ನಗರದ ಹೊರವಲಯದ ದೇರೇಬೈಲ್ ಸಮೀಪದ ಬೋರುಗುಡ್ಡೆ ಎಂಬಲ್ಲಿ ರವಿವಾರ ರಾತ್ರಿ ಸಿಡಿಲಾಘಾತದಿಂದ ಎರಡೂವರೆ ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.
ಉತ್ತರ ಕರ್ನಾಟಕ ಮೂಲದ ಕಾರ್ಮಿಕ ಹನುಮಂತ ಕೆ. ಎಂಬವರ ಮುತ್ತು ಎಂಬ ಹೆಸರಿನ ಗಂಡು ಮಗು ಮೃತಪಟ್ಟಿದೆ.
ಹನುಮಂತ ಅವರ ಕುಟುಂಬ ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ರವಿವಾರ ರಾತ್ರಿ ಸುಮಾರು 7:30ರ ವೇಳೆಗೆ ಭಾರೀ ಗುಡುಗು- ಸಿಡಿಲು ಆರಂಭವಾದಾಗಿತ್ತು. ಇದೇ ಸಂದರ್ಭ ಮನೆಯೊಳಗೆ ಆಟವಾಡುತ್ತಿದ್ದ ಮಗು ಹೊರಗೋಡಿ ಬಂದಿದ್ದು, ಈ ವೇಳೆ ಬಡಿದ ಸಿಡಿಲಿನ ಆಘಾತಕ್ಕೆ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.