×
Ad

ನನಗೆ ಬದುಕುವ ಬಯಕೆಯಿಲ್ಲ: ಇಮೇಲ್ ನಲ್ಲಿ ತಿಳಿಸಿದ್ದ ಸುನಂದಾ ಪುಷ್ಕರ್

Update: 2018-05-28 22:43 IST

ಹೊಸದಿಲ್ಲಿ, ಮೇ 28: “ನನಗೆ ಬದುಕುವ ಬಯಕೆಯಿಲ್ಲ… ಸಾವಿಗಾಗಿಯೇ ನಾನು ಪ್ರಾರ್ಥಿಸುತ್ತೇನೆ”… ಎಂದು ದಿಲ್ಲಿಯ ವಿಲಾಸಿ ಹೊಟೇಲ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗುವುದಕ್ಕೆ ಮೊದಲು ಸುನಂದಾ ಪುಷ್ಕರ್ ತನ್ನ ಪತಿ ಶಶಿ ತರೂರ್ ರಿಗೆ ಕಳುಹಿಸಿದ್ದ ಇ ಮೇಲ್ ನಲ್ಲಿ ತಿಳಿಸಿದ್ದರು ಎಂದು ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸುನಂದಾರ ಮೇಲ್ ಹಾಗು ಸಾಮಾಜಿಕ ಜಾಲತಾಣಗಳಲ್ಲಿರುವ ಅವರ ಸಂದೇಶಗಳನ್ನು “ಮರಣ ಹೇಳಿಕೆ”ಗಳೆಂದು ಪರಿಗಣಿಸಲಾಗಿದೆ ಎಂದು ಅಡಿಶನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ರಿಗೆ ದಿಲ್ಲಿ ಪೊಲೀಸರು ತಿಳಿಸಿದರು. ಈ ಪ್ರಕರಣದ ತೀರ್ಪು ಜೂನ್ 5ರಂದು ಹೊರಬೀಳಲಿದೆ.

ವಿಷ ಸೇವನೆಯಿಂದ ಸುನಂದಾರ ಸಾವು ಸಂಭವಿಸಿದೆ. ಅವರ ಕೋಣೆಯಲ್ಲಿ 27 ಅಲ್ಪ್ರಾಕ್ಸ್ ಮಾತ್ರೆಗಳು ಲಭಿಸಿತ್ತು. ಆದರೆ ಸುನಂದಾ ಎಷ್ಟು ಮಾತ್ರೆಗಳನ್ನು ಸೇವಿಸಿದ್ದರು ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News