ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ನಿವೃತ್ತ ಶಿಕ್ಷಕಿ ಇಂಗ್ಲಿಷ್ ವ್ಯಾಕರಣ ಪಾಠ ಮಾಡಿದ್ದು ಹೀಗೆ…

Update: 2018-05-29 09:17 GMT

ವಾಷಿಂಗ್ಟನ್, ಮೇ 29: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇತ್ತೀಚೆಗೆ ಅಟ್ಲಾಂಟಾದ 61 ವರ್ಷ ವಯಸ್ಸಿನ ನಿವೃತ್ತ ಇಂಗ್ಲಿಷ್ ಶಿಕ್ಷಕಿಯೊಬ್ಬರು ಪಾಠ ಹೇಳಿಕೊಟ್ಟಿದ್ದಾರೆ.

ಯವೋನ್ನ್ ಮೇಸನ್ ಎಂಬ ಈ ಶಿಕ್ಷಕಿ ಇತ್ತೀಚೆಗೆ ಟ್ರಂಪ್ ಅವರಿಗೆ ಪತ್ರವೊಂದನ್ನು ಬರೆದು ಫೆಬ್ರವರಿಯಲ್ಲಿ ಫ್ಲೋರಿಡಾ ಹೈಸ್ಕೂಲ್ ನಲ್ಲಿ ನಡೆದ ಗುಂಡು ದಾಳಿ ಪ್ರಕರಣದಲ್ಲಿ ಸಾವಿಗೀಡಾದವರ ಕುಟುಂಬ ಸದಸ್ಯರನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದರು.

ಈ ಪತ್ರ ದೊರೆತೊಡನೆ ವೈಟ್ ಹೌಸ್ ಈ ಶಿಕ್ಷಕಿಗೆ ಟ್ರಂಪ್ ಸಹಿಯಿರುವ ಪತ್ರವೊಂದನ್ನು ರವಾನಿಸಿದ್ದು ಆ ಪತ್ರ ತುಂಬಾ ವ್ಯಾಕರಣ ತಪ್ಪುಗಳಿದ್ದವೆನ್ನಲಾಗಿದೆ. ಇಂಗ್ಲಿಷ್ ಶಿಕ್ಷಕಿಯಾಗಿರುವ ಮೇಸನ್ ಈ ತಪ್ಪುಗಳನ್ನೆಲ್ಲಾ ತಿದ್ದಿ ಅದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ನಂತರ ವೈಟ್ ಹೌಸ್ ಗೆ ರವಾನಿಸಿದ್ದರು.

ಪತ್ರದ ಮೇಲಿನ ಭಾಗದಲ್ಲಿ “ನೀವೆಲ್ಲಾ ಗ್ರಾಮರ್ ಮತ್ತು ಸ್ಟೈಲ್ ಚೆಕ್ ಮಾಡಿದ್ದೀರಾ?'' ಎಂದೂ ಪ್ರಶ್ನಿಸಿದ್ದಾರೆ. ಅದೊಂದು ತಪ್ಪು ತಪ್ಪಾದ ಪದಗಳಿರುವ ಪತ್ರವಾಗಿದ್ದು. ಇಷ್ಟೊಂದು ತಪ್ಪುಗಳನ್ನು ನೋಡಿ ನನಗೆ ಸಹಿಸಿಕೊಂಡಿರಲು ಅಸಾಧ್ಯ ಎಂದು ಶಿಕ್ಷಕಿ ಹೇಳಿದ್ದಾರೆ.

ಅಷ್ಟಕ್ಕೂ ಆಕೆಯ ಪತ್ರಕ್ಕೆ ಪ್ರತಿಕ್ರಿಯೆಯಾಗಿ ವೈಟ್ ಹೌಸ್ ಕಳುಹಿಸಿದ್ದ ಪತ್ರದಲ್ಲಿ  ಆಕೆಯ ಸಲಹೆಯ ಬಗ್ಗೆ ಉಲ್ಲೇಖವಿರಲಿಲ್ಲ, ಬದಲಾಗಿ ಸರಕಾರ  ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಅದು ಹೇಳಿಕೊಂಡಿತ್ತು. ಆದರೆ ಆಕೆ ತಿದ್ದಿದ ಪತ್ರದಲ್ಲಿ  ಉಪಯೋಗಿಸಿದ ಕೆಲ ಪದಗಳ ಪ್ರಯೋಗದ ಬಗ್ಗೆ ಕೆಲವರು ತಮ್ಮ ಆಕ್ಷೇಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News