ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕೃತಕ ನೆರೆ

Update: 2018-05-29 10:43 GMT

ಮಂಗಳೂರು, ಮೇ 29: ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ಕೈಗಾರಿಕಾ ವಲಯವಾಗಿರುವ ಬೈಕಂಪಾಡಿಯಲ್ಲಿ ಕೃತಕ ನೆರೆ ಉಂಟಾಗಿದೆ. ಇದರಿಂದ ಹಲವು ಫ್ಯಾಕ್ಟರಿಗಳಿಗೆ ನೀರು ನುಗ್ಗಿದ್ದು, ಭಾರೀ ಪ್ರಮಾಣದ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

ಕೈಗಾರಿಕಾ ವಲಯದ ಫ್ಲ್ಯಾಟ್ ಸಂಖ್ಯೆ 192ಸಿ, 394ಎ, 396ಬಿ, 192, 193 ಸೇರಿದಂತೆ ಹಲವು ಫ್ಯಾಕ್ಟರಿಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ.

ಕಳೆದ 25 ವರ್ಷಗಳಿಂದ ನಮ್ಮ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದೆ‌‌. ಇದೇ ಮೊದಲ ಬಾರಿಗೆ ಈ ತರಹ ಫ್ಯಾಕ್ಟರಿಯೊಳಗೆ ನೀರು ನುಗ್ಗಿರುವುದು. ಇದರಿಂದಾಗಿ  ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.

ಒಳಚರಂಡಿಗಳನ್ನು ಸಮಪರ್ಕವಾಗಿ ಸ್ವಚ್ಛ ಮಾಡದಿರುವುದು, ರಸ್ತೆಯನ್ನು ಎತ್ತರಿಸಿ ಕಾಂಕ್ರಿಟ್ ಹಾಕಿದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ಈ ಕೃತಕ ನೆರೆಗೆ ಕಾರಣ ಎಂದು ಎಕೋಲೈಟ್ ಸಿಂಥೆಟಿಕ್ ರೇಝಿನಿಸ್ ಕೆಮಿಕಲ್ ಫ್ಯಾಕ್ಟರಿಯ ಮ್ಯಾನೇಜರ್ ರಫೀಕ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News