ಮಳೆ: ತುರ್ತು ನೆರವಿಗೆ ದ.ಕ. ಜಿಲ್ಲಾಡಳಿತದಿಂದ ಸಹಾಯವಾಣಿ
Update: 2018-05-29 16:23 IST
ಮಂಗಳೂರು, ಮೇ 29: ಮಂಗಳೂರಿನಲ್ಲಿ ಭಾರೀ ಮಳೆಯಾಗಿದ್ದರೂ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಈಗಾಗಲೇ ಜಿಲ್ಲಾಡಳಿತ ಮತ್ತು ನಾಗರಿಕ ನೆಲೆಯಲ್ಲಿ ಹಲವು ತಂಡಗಳನ್ನು ರಚಿಸಿದೆ.
ಮಳೆ ಪರಿಸ್ಥಿತಿ ಇನ್ನು ಒಂದೂವರೆ ದಿನಗಳ ತನಕ ಮುಂದುವರಿಯುವ ಸಂಭವ ಇದ್ದು, ಅದಕ್ಕಾಗಿ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದಾದರೂ ತುರ್ತು ನೆರವು ಬೇಕಾದ್ದಲ್ಲಿ ದೂರವಾಣಿ ಸಂಖ್ಯೆ 9448549445, -9448104455 ಅನ್ನು ಸಂಪರ್ಕಿಸುವಂತೆ ಪ್ರಕಟನೆ ಕೋರಿದೆ.