×
Ad

ಬಂಟ್ವಾಳದಲ್ಲಿ ದುರಹಂಕಾರದ ರಾಜಕಾರಣಕ್ಕೆ ಸೋಲಾಗಿದೆ: ಹರಿಕೃಷ್ಣ ಬಂಟ್ವಾಳ

Update: 2018-05-29 18:03 IST

ಬಂಟ್ವಾಳ, ಮೇ 29: ಬಂಟ್ವಾಳದಲ್ಲಿ ದುರಹಂಕಾರದ ರಾಜಕಾರಣಕ್ಕೆ ಸೋಲಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರೋಧಿಗಳು ಒಂದಾಗಿದ್ದು, ಕಾರ್ಯಕರ್ತರು ಈ ಸವಾಲನ್ನು ಎದುರಿಸಲು ಸಿದ್ಧರಾಗಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಪಂಜಿಕಲ್ಲು ಗ್ರಾಮದ ಪುಂಚೋಡಿಯಲ್ಲಿ ಸೋಮವಾರ ರಾತ್ರಿ ನಡೆದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಮಾತನಾಡಿ, ಪಕ್ಷ ಸಂಘಟಿತದಿಂದ ಚುನಾವಣೆಯಲ್ಲಿ ಗೆಲುವಾಗಿದೆ. ಗೆಲುವಿಗಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಕಾರ್ಯಕರ್ತರೆಲ್ಲರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿಪಂ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ಪಂಜಿಕಲ್ಲು ಭಾಗದ ಕಾರ್ಯಕರ್ತರ ಪರಿಶ್ರಮದಿಂದ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿಗೆ ಒಂದು ಸಾವಿರಕ್ಕೂ ಮಿಕ್ಕಿದ ಮತಗಳ ಮುನ್ನಡೆ ದೊರಕಲು ಸಾಧ್ಯವಾಯಿತೆಂದರು.

ಈ ಸಂದರ್ಭದಲ್ಲಿ ಕ ಸಂಜೀವ ಪೂಜಾರಿ ಪಿಲಿಂಗಾಲು, ಕರುಣೇಂದ್ರ ಪೂಜಾರಿ, ಗ್ರಾಪಂ ಅಧ್ಯಕ್ಷ ಚಿದಾನಂದ ಕುಲಾಲ್, ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ್ ಪಂಜಿಕಲ್ಲು, ದಯಾನಂದ ಗೌಡ, ಹರೀಶ್ ಪೂಜಾರಿ, ಹರೀಣಾಕ್ಷಿ, ಬೂತ್ ಸಮಿತಿ ಅಧ್ಯಕ್ಷ ವಿಕೇಶ್, ಕೆ.ಎನ್ ಶೇಖರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News