ತುಂಬೆ ಕುಲಾಲ ಸೇವಾ ಸಂಘ: ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
ಬಂಟ್ವಾಳ, ಮೇ 29: ಕುಲಾಲ ಸೇವಾ ಸಂಘ ತುಂಬೆ ಇದರ 4ನೆ ವರ್ಷದ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ತುಂಬೆಯ ರಾಮಲ್ ಕಟ್ಟೆ ಶಾರದಾ ಸಭಾ ಭವನದಲ್ಲಿ ಮಂಗಳವಾರ ನಡೆಯಿತು.
ಭಾರತೀಯ ಜೀವಾವಿಮಾ ನಿಗಮ ಕಾರ್ಕಳ ಶಾಖೆಯ ಉಪಶಾಖಾಧಿಕಾರಿ ಸೋಮಸುಂರ್ ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ದೇಶದ ಸಂಸ್ಕತಿ ಹಾಗೂ ನಡೆನುಡಿಯನ್ನು ಪಾಲಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಲಿಂಗಪ್ಪ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಯಲಕ್ಷ್ಮೀ.ಎಸ್.ಬಂಗೇರ ಸಂಘದವರು ಉಚಿತವಾಗಿ ನೀಡಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ವೇದಿಕೆಯಲ್ಲಿ ಸಿಆರ್‌ಪಿಎಫ್ ನಿವೃತ್ತ ಯೋಧ ಒ.ಆರ್. ಮಾಯಿಲಪ್ಪ ಸಂಪಾಜೆ, ಕರ್ನಾಟಕ ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಶೇಷಪ್ಪ ಮಾಸ್ತರ್, ಸಂಘದ ಗೌರವಾಧ್ಯಕ್ಷ ನೀಲಪ್ಪ ಸಾಲಿಯಾನ್ ಉಪಸ್ಥಿತರಿದ್ದರು.
ಸಂದೀಪ್ ಕುಲಾಲ್ ವರದಿ ವಾಚಿಸಿದರು. ಖಜಾಂಚಿ ಹರೀಶ್ ಪೆರ್ಲಬೈಲು ಸ್ವಾಗತಿಸಿ, ಕಾರ್ಯದರ್ಶಿ ಭಾಸ್ಕರ್ ಕುಲಾಲ್ ವಂದಿಸಿದರು. ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಘದ ಮಹಿಳಾ ಘಟಕವನ್ನು ಸ್ಥಾಪಿಸಲಾಯಿತು.