ಇವಿಎಂಗಳನ್ನು ಗುಜಿರಿಗೆ ಹಾಕಿ: ಅಖಿಲೇಶ್ ಯಾದವ್

Update: 2018-05-29 16:25 GMT

ಲಕ್ನೋ, ಮೇ 29: ಚುನಾವಣಾ ಆಯೋಗ ಮತ ಯಂತ್ರಗಳನ್ನು ಗುಜಿರಿಗೆ ಹಾಕಬೇಕು ಹಾಗೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಪತ್ರಗಳನ್ನು ಬಳಸಬೇಕು ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ.

 ದೇಶಾದ್ಯಂತ ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಮತ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಅವರು ಮತ ಯಂತ್ರಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ದೇಶದ 10 ರಾಜ್ಯಗಳಲ್ಲಿ ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಬಳಸಲಾಗಿದ್ದ 10,330 ವಿವಿಪ್ಯಾಟ್‌ಗಳಲ್ಲಿ ಸುಮಾರು ಶೇ. 10 ಕಾರ್ಯ ನಿರ್ವಹಿಸಲಿಲ್ಲ. ಅನಂತರ ಬದಲಿ ವಿವಿಪಾಟ್‌ಗಳನ್ನು ಬಳಸಲಾಯಿತು ಎಂದು ಅವರು ಹೇಳಿದ್ದಾರೆ. ಉತ್ತರಪ್ರದೇಶದ ಕೈರನಾ ಹಾಗೂ ಮಹಾರಾಷ್ಟ್ರದ ಭಂಡಾರ ಗೊಂಡಿಯಾದ ಲೋಕಸಭಾ ಉಪ ಚುನಾವಣೆಯಲ್ಲಿ ಶೇ. 20 ವಿವಿಪಾಟ್‌ಗಳನ್ನು ದೋಷಯುಕ್ತವಾಗಿದ್ದು, ಬದಲಾಯಿಸಲಾಯಿತು.

‘‘ಚುನಾವಣೆಯಲ್ಲಿ ಇಂತದ್ದು ಸಂಭವಿಸಿದರೆ, ಜನರಿಗೆ ಸಂಶಯ ಮೂಡುತ್ತದೆ. ನಾನು ಇದನ್ನು ಹಿಂದೆಯೇ ಹೇಳಿದ್ದೆ. ಸಾಮಾನ್ಯ ಮನುಷ್ಯರು ಯಾವತ್ತೂ ಈ ಮತ ಯಂತ್ರವನ್ನು ನಂಬಲಾರರು’’ ಎಂದು ಯಾದವ್ ಹೇಳಿದ್ದಾರೆ. 2017 ಡಿಸೆಂಬರ್‌ನಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ ಯಂತ್ರ ನೆರವಾಯಿತು ಎಂಬ ಪ್ರತಿಪಕ್ಷಗಳ ಆರೋಪದವನ್ನು ಉಲ್ಲೇಖಿಸಿ ಯಾದವ್, ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳು ಗುಜರಾತ್‌ನಲ್ಲಿ ಬಳಸಿದವು. ಸೂರತ್ ಕೇವಲ ಜವಳಿಯನ್ನು ಮಾತ್ರ ಉತ್ಪಾದಿಸುವುದಲ್ಲ, ಸರಕಾರವನ್ನು ಕೂಡ ರೂಪಿಸುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News