ರೊಟೋಮ್ಯಾಕ್‌ನ 177 ಕೋ. ರೂ. ಆಸ್ತಿ ಮುಟ್ಟುಗೋಲು

Update: 2018-05-29 16:28 GMT

ಹೊಸದಿಲ್ಲಿ, ಮೇ 29: ಕಾನ್ಪುರ ಮೂಲದ ರೊಟೋಮ್ಯಾಕ್ ಗುಂಪು ಬ್ಯಾಂಕ್‌ಗೆ 3,695 ಕೋ. ರೂ. ವಂಚಿಸಿದ ಪ್ರಕರಣದ ತನಿಖೆಗೆ ಸಂಬಂಧಿಸಿ 177 ಕೋ. ರೂ. ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ಹೇಳಿದೆ.

ಹಣ ವಂಚನೆ ತಡೆ ಕಾಯ್ದೆ ಅಡಿಯಲ್ಲಿ ರೋಟೋಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಮಾಲಕತ್ವದ ಹಾಗೂ ಅದರ ನಿರ್ದೇಶಕರ ಕಾನ್ಪುರ (ಉತ್ತರಪ್ರದೇಶ), ಡೆಹ್ರಾಡೂನ್ (ಉತ್ತರಾಖಂಡ), ಅಹ್ಮದಾಬಾದ್ ಹಾಗೂ ಗಾಂಧಿ ನಗರ (ಗುಜರಾತ್) ಹಾಗೂ ಮುಂಬೈ (ಮಹಾರಾಷ್ಟ್ರ)ಯಲ್ಲಿರುವ 177 ಕೋ. ರೂ. ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೋಮವಾರ ಔಪಚಾರಿಕ ಆದೇಶ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News