×
Ad

ಮೇ 30: ಸ್ವಾಗತ ಗೋಪುರ ಉದ್ಘಾಟನೆ

Update: 2018-05-29 22:21 IST

ಉಡುಪಿ, ಮೇ 29: ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 2ನೇ ಪರ್ಯಾಯದ ಅವದಿಯಲ್ಲಿ ಲೋಕಾರ್ಪಣೆಗೊಂಡ ಕಿನ್ನಿಮೂಲ್ಕಿ ಸ್ವಾಗತ ಗೋಪುರ ನವೀಕರಣಗೊಂಡು ಸಿದ್ದವಾಗಿದ್ದು, ಮೇ 30ರ ಅಪರಾಹ್ನ 12 ಗಂಟೆಗೆ ಇದರ ಉದ್ಘಾಟನೆ ನಡೆಯಲಿದೆ.

ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನವೀಕೃತ ಗೋಪುರವನ್ನು ಉದ್ಘಾಟಿಸ ಲಿದ್ದು, ಶಾಸಕ ರಘುಪತಿ ಭಟ್ ಅಲ್ಲದೇ ಉಡುಪಿ ನಗರಸಭೆ ಮತ್ತು ಸಿಂಡಿಕೇಟ್ ಬ್ಯಾಂಕ್‌ನ ಗಣ್ಯರ ಉಪಸ್ಥಿತರಿರುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News