ಬೆಂಗಾಲ್ ವಾರಿಯರ್ಸ್ ಪರ ಆಡಲು ಕಡಬ ತಾಲೂಕಿನ ಮಿಥಿನ್ ಕುಮಾರ್ ಆಯ್ಕೆ
Update: 2018-05-30 18:04 IST
ಕಡಬ, ಮೇ30: ಮುಂಬರುವ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಪರ ಆಡಲು ದಕ್ಷಿಣ ಕನ್ನಡದ ಕಡಬ ತಾಲೂಕಿನ ಯುವಕನೋರ್ವ ಆಯ್ಕೆಯಾಗಿದ್ದಾರೆ.
ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಅನ್ನಯ್ಯ - ಪ್ರೇಮ ದಂಪತಿಯ ಪುತ್ರ,1998 ಡಿ.13 ರಂದು ಜನಿಸಿರುವ ಮಿಥಿನ್ ಕುಮಾರ್ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ವ್ಯಾಸಂಗವನ್ನು ಪೂರೈಸಿರುತ್ತಾರೆ.
ಪ್ರೋ ಕಬಡ್ಡಿ 2018 ರಲ್ಲಿ ಜೂನಿಯರ್ ರಾಷ್ಟ್ರೀಯ ಆಟಗಾರನಾಗಿ ಬೆಂಗಾಲ್ ವಾರಿಯರ್ಸ್ ಪರ ಆಡಲಿದ್ದಾರೆ. ಕಳೆದ ತಿಂಗಳು ಮುಂಬೈನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಅವರನ್ನು ಮೇ 30 ರಂದು ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.