ಜಿಪಂ: ಸಿದ್ಧಾಪುರ ಕ್ಷೇತ್ರಕ್ಕೆ ಉಪಚುನಾವಣೆ
ಉಡುಪಿ, ಮೇ 30: ಹಾಲಾಡಿ ತಾರಾನಾಥ ಶೆಟ್ಟಿ ಅವರ ನಿಧನದಿಂದ ತೆರವಾಗಿರುವ ಕುಂದಾಪುರ ತಾಲೂಕು ಸಿದ್ದಾಪುರ ಜಿಪಂ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜೂ.14ರ ಗುರುವಾರ ಮತದಾನ ನಡೆಯಲಿದೆ.
ಹಿಂದುಳಿದ ವರ್ಗ ‘ಬ’ ಅಭ್ಯರ್ಥಿಗೆ ಮೀಸಲಾದ ಸಿದ್ಧಾಪುರ ಜಿಪಂ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಕೆ ಇಂದು ಪ್ರಾರಂಭಗೊಂಡಿದ್ದು, ಜೂನ್ 2 ಕೊನೆಯ ದಿನವಾಗಿರುತ್ತದೆ. ಜೂ.4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ.6 ನಾಮಪತ್ರ ಹಿಂದೆಗೆಯಲು ಕೊನೆಯ ವಾಗಿರುತ್ತದೆ. ಅಗತ್ಯ ಬಿದ್ದರೆ ಜೂ.14ರಂದು ಮತದಾನ ನಡೆದು ಜೂ.17ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಈ ಉಪಚುನಾವಣೆಗೆ ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್ ಚುನಾವಣಾಧಿಕಾರಿಯಾಗಿದ್ದು, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ. ಅ್ಯರ್ಥಿಗಳು ನಾಮಪತ್ರಗಳನ್ನು ಕುಂದಾಪುರ ಸಹಾಯಕ ಕಮೀಷನರ್ ಅವರ ಕಚೇರಿಯಲ್ಲಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಚುನಾವಣೆ ನಡೆಯುವ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 30ರಿಂದ ಜೂ.17 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದೂ ಪ್ರಕಟಣೆ ತಿಳಿಸಿದೆ.