×
Ad

ಉಡುಪಿ: ಜಿಲ್ಲೆಯ 5 ಗ್ರಾಪಂ ಸ್ಥಾನಗಳಿಗೆ ಉಪ ಚುನಾವಣೆ

Update: 2018-05-30 20:01 IST

ಉಡುಪಿ, ಮೇ 30: ಜಿಲ್ಲೆಯಲ್ಲಿ ಖಾಲಿ ಇರುವ ಉಡುಪಿ ತಾಲೂಕಿನ 3, ಕುಂದಾಪುರದ ಒಂದು ಹಾಗೂ ಕಾರ್ಕಳದ ಒಂದು ಸೇರಿದಂತೆ ಒಟ್ಟು ಐದು ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆಗೆ ಜೂನ್ 2 ಕೊನೆಯ ದಿನವಾಗಿರುತ್ತದೆ.

ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಪಂನ ಕಾವ್ರಾಡಿ-2 ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಡುಪಿ ತಾಲೂಕಿನ ಪೆರ್ಡೂರು ಗ್ರಾಪಂನ ಪೆರ್ಡೂರು-6 ಕ್ಷೇತ್ರ ಸಾಮಾನ್ಯ, ಕೊಕ್ಕರ್ಣೆ ಗ್ರಾಪಂನ 34ಕುದಿ-4 ಕ್ಷೇತ್ರ ಸಾಮಾನ್ಯ, ಬಾರಕೂರು ಗ್ರಾಪಂನ ಕಚ್ಚೂರು-1 ಕ್ಷೇತ್ರ ಪರಿಶಿಷ್ಟ ಮಹಿಳೆಗೆ ಮೀಸಲಾಗಿರುತ್ತದೆ.

ಉಪಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಯಾ ಗ್ರಾಪಂಗಳಲ್ಲಿ ಇಂದಿನಿಂದ ಜೂ.2 ಅಪರಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು. ಜೂ.4ರಂದು ನಾಮಪತ್ರಗಳ ಪರಿಶೀಲನೆ, ಜೂ.14ಕ್ಕೆ ಮತದಾನ ನಡೆಯಲಿದೆ. ಜೂ.17ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮದ್ಯ ಮಾರಾಟ ನಿಷೇಧ:   ಚುನಾವಣೆಯು ಶಾಂತಿಯುತವಾಗಿ ಮತ್ತು ಮುಕ್ತವಾಗಿ ನಡೆಯುವಂತಾಗಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಎಲ್ಲಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ, ಮದ್ಯ ಮಾರಾಟ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಮೇ 30ರಿಂದ ಜೂ.17ರ ಮಧ್ಯರಾತ್ರಿಯವರೆಗೆ ಮುಚ್ಚುವಂತೆ ಹಾಗೂ ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ಒಣದಿನ (ಡ್ರೈ ಡೇ) ಎಂದು ಘೋಷಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News