ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ: ಅಂಧ ಮತದಾರರರಿಗೆ ಸಹಾಯಕ ಸೌಲಭ್ಯ
Update: 2018-05-30 20:03 IST
ಉಡುಪಿ, ಮೇ 30: ಜೂ.8ರಂದು ನಡೆಯುವ ಕರ್ನಾಟಕ ವಿಧಾನ ಪರಿಷತ್‌ನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರಲ್ಲಿ ಯಾರಾದರೂ ಅಂಧ ಮತದಾರರಿದ್ದು, ಮತದಾನ ಮಾಡುವ ವೇಳೆ ಅವರಿಗೆ ಸಹಾಯಕರ ಅಗತ್ಯವಿದ್ದಲ್ಲಿ ಅಂತಹ ಮತದಾರರು ತಮ್ಮ ಹೆಸರು,ಭಾಗ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಅಪೇಕ್ಷಿಸುವ ಸಹಾಯಕರ ಹೆಸರು, ವಿಳಾಸ ಮತ್ತು ಭಾವಚಿತ್ರವಿರುವ ವಿವರವನ್ನು ಜೂನ್ 5ರ ಒಳಗೆ ಚುನಾವಣಾಧಿಕಾರಿ, ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ/ಶಿಕ್ಷಕರ ಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.