ಸಿಬಿಎಸ್‌ಇ: ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಗೆ ಶೇ.100 ಫಲಿತಾಂಶ
ಬಂಟ್ವಾಳ, ಮೇ 30: ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯು ಸಿಬಿಎಸ್‌ಇ 2017-18ನೆ ಸಾಲಿನ 10ನೆ ತರಗತಿ ಪರೀಕ್ಷೆಯಲ್ಲಿ ಸತತ 7ನೆ ಬಾರಿ ಶೇ.100 ಫಲಿತಾಂಶವನ್ನು ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಮಹಿಕಾ ಕೆ.ಎಸ್, ನಾದಿಯಾ ರಾಥೋರ್, ಜಿತಿನ್ ಬಂಗೇರ, ರತ್ನಾಕರ್ ಪೈ ಎಸ್., ಅಲಿನಾ ಜೋಸ್, ಅಶ್ವಿನ್ ಸುನೀಲ್ ಕುಮಾರ್, ಜೆನಿವಾ ವೆಸ್ಲಿಯಾ ವಾಸ್ ಶೇ.90ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರಲ್ಲಿ ಮಹಿಕಾ ಕೆ. ಎಸ್. ಶೇ. 96.4 ಅಂಕ ಪಡೆದು ಪ್ರಥಮ ಸ್ಥಾನವನ್ನೂ, ನಾದಿಯಾ ರಾಥೋರ್ ಶೇ. 95.6 ಅಂಕ ಪಡೆದು ದ್ವಿತೀಯ ಸ್ಥಾನವನ್ನೂ ಪಡೆದಿದ್ದಾರೆ. ಜಿತಿನ್ ಬಂಗೇರ ಶೇ.94.8, ರತ್ನಾಕರ ಪೈ ಎಸ್. ಮತ್ತು ಆಲಿನಾ ಜೋಸ್ ಶೇ.91.2, ಅಶ್ವಿನ್ ಶೇ. 91 ಮತ್ತು ಜೆನಿವಾ ವೆಸ್ಲಿಯಾ ವಾಸ್ ಶೇ.90 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲೆ ರಮಾಶಂಕರ್ ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.