×
Ad

ಭಾರತ ಸರಕಾರದ ಪ್ರಮಾಣ ಪತ್ರ ಪಡೆದ ಮೂಸಾ ಫಝಿಲ್

Update: 2018-05-30 21:19 IST

ಮಂಗಳೂರು, ಮೇ 30: ಫಝಿಲ್ ಕ್ರಿಯೇಶನ್ಸ್‌ನ ಕಾರ್ಯನಿರ್ವಾಹಣಾಧಿಕಾರಿ ಮೂಸಾ ಫಝಿಲ್ ಗವರ್ನೆನ್ಸ್ ಕ್ವಿಝ್ 2018ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕಾರಣಕ್ಕೆ ಭಾರತ ಸರಕಾರದಿಂದ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.

ಅವರು ಮೈ ಗವ್ ಗವರ್ನೆನ್ಸ್ ಕ್ವಿಝ್ 2018ರಲ್ಲಿ ಭಾಗವಹಿಸಿದ್ದರು ಮತ್ತು ಅದಕ್ಕಾಗಿ ಈ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಮೂಸಾ ಫಝಿಲ್ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದಾರೆ.

ಈಗಾಗಲೇ ಅವರು ಎಸ್‌ಇಬಿಯ ವಿಶೇಷ ಚಟುವಟಿಕೆಗಳಿಗಾಗಿ ಪ್ರಶಸ್ತಿ, ಯುಎಫ್‌ಬಿಎಂನ ಪ್ರಶಂಸಾ ಪತ್ರ, ಎಚ್‌ಐಎಫ್‌ನ ಪ್ರಶಂಸಾ ಪತ್ರ, ಗೂಗಲ್‌ನ ಪ್ರಮಾಣ ಪತ್ರ, ಫೇಸ್‌ಬುಕ್ ಪ್ರಮಾಣ ಪತ್ರ, ನಿಖಾಪಾರ್ಟ್‌ನರ್.ಕಾಮ್‌ನಿಂದ ಶುಭಾಶಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅವರು ಮುಹಮ್ಮದ್ ಸಲೀಂ ಮತ್ತು ಅಮಿನಾ ಅವರ ಹಿರಿಯ ಪುತ್ರನಾಗಿದ್ದಾರೆ. ಮೂಸಾ ಫಝಿಲ್ ಭಾರತದ ಅತ್ಯಂತ ಕಿರಿಯ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ. ಗೂಗಲ್ ಮತ್ತು ಫೇಸ್‌ಬುಕ್‌ನಿಂದ ಪ್ರಮಾಣ ಪತ್ರ ಪಡೆದ ಮಂಗಳೂರಿನ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News