ಹೊಳೆಗೆ ಬಿದ್ದು ಮೃತ್ಯು
Update: 2018-05-30 22:11 IST
ಬ್ರಹ್ಮಾವರ, ಮೇ 30: ಹೊಳೆಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಚ್ಚೂರು ಗ್ರಾಮದ ಚಿನ್ನಂಪಳ್ಳಿ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಚಿನ್ನಂಪಳ್ಳಿ ನಿವಾಸಿ ಲಚ್ಚಪ್ಪಜತ್ತನ್ ಎಂಬವರ ಮಗ ದಿವಾಕರ (35) ಎಂದು ಗುರುತಿಸಲಾಗಿದೆ.
ಇವರು ಮನೆ ಸಮೀಪ ಹರಿಯುತ್ತಿರುವ ಬಾರ್ಕೂರು ಹೊಳೆಯಲ್ಲಿ ಮುಖ ತೊಳೆಯಲು ಹೋದಾಗ ಫೀಡ್ಸ್ ಬಂದು ಆಕಸ್ಮಿಕ ಕಾಲು ಜಾರಿ ಹೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.