ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜು ವಿದ್ಯಾರ್ಥಿಗಳ ಉತ್ತಮ ಫಲಿತಾಂಶ
Update: 2018-05-30 23:33 IST
ಭಟ್ಕಳ, ಮೇ 30: ಎಪ್ರಿಲ್ 2018ರಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಬಿಸಿಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜು ವಿದ್ಯಾರ್ಥಿಗಳು ಶೇ. 85.25 ಫಲಿತಾಂಶ ಪಡೆದು ಸಾಧನೆಗೈದಿದ್ದಾರೆ.
ಶ್ರುತಿ ಭಟ್ ಶೇ. 89, ಕಿರಣ ಪ್ರಭು ಶೇ.87.63, ಶ್ರುತಿ ಮೊಗೇರ ಶೇ.87.38 ಪಡೆದು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ. 48 ಡಿಸ್ಟಿಂಕ್ಷನ್, 4 ಪ್ರಥಮ ದರ್ಜೆಯಲ್ಲಿ ತೇರ್ಗಡೆ ಗೊಂಡಿರುತ್ತಾರೆ. ಇವರ ಸಾಧನೆಯನ್ನು ಪ್ರಾಚಾರ್ಯರು, ಅಧ್ಯಾಪಕರು, ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.