×
Ad

ಮಂಗಳೂರು: 8ನೆ ಮಹಡಿಯಿಂದ ಬಿದ್ದು ಮಗು ಮೃತ್ಯು

Update: 2018-05-31 12:48 IST

ಮಂಗಳೂರು, ಮೇ 31: ಎಂಟನೇ ಮಹಡಿಯಿಂದ ಬಿದ್ದು ಮಗುವೊಂದು ಮೃತಪಟ್ಟ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ವಿಲ್ಸನ್ ಮತ್ತು ಆಲಿತಾ ದಂಪತಿಯ ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ (5) ಮೃತ ಮಗು ಎಂದು ಗುರುತಿಸಲಾಗಿದೆ.

ಪ್ಲಾಟ್ ನ ಎಂಟನೇ ಮಹಡಿಯಲ್ಲಿ ದಂಪತಿ ವಾಸವಿದ್ದರು. ಸ್ಲೈಡರ್ ಕಿಟಕಿ ಮೂಲಕ ಕೆಳಗೆ ಇಣುಕಿದ ಮಗು ಆಯತಪ್ಪಿ ಬಿದ್ದು, ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಕಿಟಕಿಗೆ ರಾಡ್ ಅಳವಡಿಸದೇ ಇರುವುದು ಈ ಅನಾಹುತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News