×
Ad

ಜೂ 2: ಅಪ್ಪೆ ಟೀಚರ್ ತುಳು ಚಿತ್ರದ ವಿರುದ್ಧ ಮಹಿಳೆಯರ ಪ್ರತಿಭಟನೆ

Update: 2018-05-31 14:16 IST

ಮಂಗಳೂರು, ಮೇ 31: ಅಪ್ಪೆ ಟೀಚರ್ ತುಳು‌ ಚಲನಚಿತ್ರದಲ್ಲಿ ಮಹಿಳೆಯರಿಗೆ ಅವಮಾನ‌  ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಜೂ 2 ರಂದು  ಮಂಗಳೂರಿನಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ದಿಂದ  ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಮಹಿಳಾ ಸಂಘಟನೆ ‌ಮುಖಂಡೆ ಚಂಚಲ ತೇಜೋಮಯ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಹಿಳಾ ಮಂಡಲಗಳ‌ ಒಕ್ಕೂಟ ದಿಂದ ಪತ್ರಿಕಾಗೋಷ್ಠಿ ನಡೆಸಿದ ಅವರು ಚಿತ್ರದಲ್ಲಿ ಅತ್ಯಾಚಾರ ಕ್ಕೆ ಪ್ರೇರಪಣೆ ನೀಡುವ ಅಂಶಗಳಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸೆನ್ಸಾರ್ ಬೋರ್ಡ್ ಗೆ ಕೂಡ ದೂರು ಸಲ್ಲಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿ ಯಲ್ಲಿ ಚಂದ್ರಕಲಾ ನಂದಾವರ,  ಕೆ ಎ ರೋಹಿಣಿ, ಸುಮನ್ ಶರಣ್, ಶಶಿಲೇಖ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News