×
Ad

ಬಂಟ್ವಾಳ: ನಿವೃತ್ತ ಎಸ್ಸೈ ಶಾಂತಪ್ಪರಿಗೆ ಬೀಳ್ಕೊಡುಗೆ

Update: 2018-05-31 18:24 IST

ಬಂಟ್ವಾಳ, ಮೇ 31: ಪೋಲಿಸ್ ಇಲಾಖೆಯಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್ಸೈ ಶಾಂತಪ್ಪ ಅವರ ಬೀಳ್ಕೊಡುಗೆ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡು ನಗರ ಪೋಲಿಸ್ ಠಾಣೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀನಿವಾಸ್ ಮಾತನಾಡಿ, ಹುದ್ದೆಗೆ ಸೇರಿದ ದಿನವೇ ನಿವೃತ್ತಿಯ ದಿನವೂ ನಿಗದಿಯಾಗಿರುತ್ತದೆ. ಹಾಗಾಗಿ ನಿವೃತ್ತಿ ಎನ್ನುವುದು ಸರ್ವೇ ಸಾಮಾನ್ಯ ಎಂದ ಅವರು, ನಮ್ಮ ಸಾಧನೆ, ಕರ್ತವ್ಯ ನಿಷ್ಠೆ ಹಾಗೂ ಪ್ರಮಾಣಿಕತೆ ಇವೆಲ್ಲವೂ ನಿವೃತ್ತಿಯ ನಂತರವೂ ನಮ್ಮ ಜೊತೆಯಲ್ಲಿರುತ್ತವೆ. ಒತ್ತಡದ ಕೆಲಸದ ನಡುವೆಯೂ ಪೊಲೀಸರು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ಪ್ರೊಬೇಷನರಿ ಐಪಿಎಸ್ ಅಕ್ಷಯ್ ಎಂ. ಹಾಕೆ, ಬಂಟ್ವಾಳ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್, ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ನಗರ ಠಾಣಾ ಅಪರಾಧ ವಿಭಾಗದ ಎಸ್ಸೈ ಹರೀಶ್, ಟ್ರಾಫಿಕ್ ಠಾಣಾ ಎಸ್ಸೈ ವಿಠಲ ಶೆಟ್ಟಿ, ಎಎಸ್ಸೈಗಳಾದ ಸೀತರಾಮ, ಜಯರಾಮ ರೈ, ಜಿನ್ನಪ್ಪ ಗೌಡ, ಸಂಜೀವ, ಸಿಬ್ಬಂದಿ ಕೃಷ್ಣ ಕುಲಾಲ್, ಕರೀಂ, ಮತ್ತಿತರರು ಉಪಸ್ಥಿತರಿದ್ದರು.

ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೊಬೇಷನರಿ ಎಸ್ಸೈ ಸೌಮ್ಯ ಸ್ವಾಗತಿಸಿ, ವಂದಿಸಿದರು. ನಾಗರಾಜ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News