ಉಡುಪಿ: ಸತತ ಎರಡನೇ ದಿನ ಬ್ಯಾಂಕ್ ಮುಷ್ಕರ
ಉಡುಪಿ, ಮೇ 31: ಕೇಂದ್ರ ಸರಕಾರದ ನೌಕರ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ಅಧಿಕಾರಿ ಮತ್ತು ನೌಕರರ ಸಂಘಟನೆಗಳ ಒಕ್ಕೂಟದ ಉಡುಪಿ ಜಿಲ್ಲಾ ಘಟಕ ನಡೆಸಿದ ಮುಷ್ಕರ ಎರಡನೇ ದಿನವಾದ ಇಂದು ನಗರದ ಕಾರ್ಪೋರೇಷನ್ ಬ್ಯಾಂಕಿನ ವಲಯ ಕಚೇರಿ ಎದುರು ನಡೆಯಿತು. ಮೊದಲ ದಿನವಾಗ ನಿನ್ನೆ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿ ಎದುರು ನಡೆದಿತ್ತು.
ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ವೇತನ ಪರಿಷ್ಕರಣೆ, ಇತ್ತೀಚೆಗೆ ನಡೆದ ಮಾತುಕತೆಯಲ್ಲಿ ಶೇ.2ರಷ್ಟು ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿರುವುದಕ್ಕೆ ವಿರೋಧ, ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ತಾರತಮ್ಯವಿಲ್ಲದ ಸಮಾನ ಪಿಂಚಣಿ ಯೋಜನೆ ಜಾರಿ, ಕುಟುಂಬ ಪಿಂಚಣಿ ಯೋಜನೆಯಲ್ಲಿ ಸುಧಾರಣೆ, ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಶೀಘ್ರ ಭರ್ತಿ, ಸುಸ್ತಿ ಸಾಲಗಾರರ ಸಾಲ ವಸೂಲಾತಿಗೆ ಕಠಿಣ ಕಾರ್ಯಕ್ರಮಗಳ ಜಾರಿ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಎರಡು ದಿನಗಳ ಈ ವುುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.
ಭಾರತೀಯ ಸ್ಟೇಟ್ ಬ್ಯಾಂಕಿನ ಕೆ.ಆರ್.ಶೆಣೈ, ಪ್ರಕಾಶ್ ಜೋಗಿ, ಸಿಂಡಿಕೇಟ್ ಬ್ಯಾಂಕಿನ ರವಿ, ಶಶಿಧರ್ ಶೆಟ್ಟಿ, ಕೆನರಾ ಬ್ಯಾಂಕಿನ ವರದರಾಜ, ರಾಕೇಶ್, ಕರ್ನಾಟಕ ಬ್ಯಾಂಕಿನ ನಿತ್ಯಾನಂದ, ರವಿಶಂಕರ್, ಕಾರ್ಪೊರೇಶನ್ ಬ್ಯಾಂಕಿನ ರಘುರಾಮಕೃಷ್ಣ ಬಲ್ಲಾಳ್, ನಾಗೇಶ್ ನಾಯಕ್, ಅಧಿಕಾರಿಗಳ ಸಂಘಟನೆ ಪರವಾಗಿ ಜಯಪ್ರಕಾಶ್ ರಾವ್, ಹೇಮಂತ್ ಯು. ಕಾಂತ್, ನೌಕರ ಸಂಘ ಟನೆ ಪರವಾಗಿ ರಾಮಮೋಹನ್, ಜಯನ್ ಮಲ್ಪೆ, ಯುಎಫ್‌ಬಿಯು ಪರ ವಾಗಿ ಹೆರಾಲ್ಡ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.