'ಹರೀಶ್ ಕುಮಾರ್ ಗೆ ಶಾಸಕತ್ವ' ಪಕ್ಷದ ಸುದೀರ್ಘ ಸೇವೆಗೆ ಸಂದ ಗೌರವ: ಫಾರೂಕ್ ಉಳ್ಳಾಲ್
Update: 2018-05-31 20:46 IST
ಮಂಗಳೂರು, ಮೇ 31: ಹರೀಶ್ ಕುಮಾರ್ ಕಾಂಗ್ರೆಸ್ ಪಕ್ಷದ ಕಷ್ಟ ಕಾಲದಲ್ಲಿ ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ಪ್ರೀತಿಗೆ, ವರಿಷ್ಠರ ಮೆಚ್ಚುಗೆಗೆ ಪಾತ್ರರಾದ ಪ್ರಾಮಾಣಿಕ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾಗಿಯೂ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿರುವ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ, ಪಕ್ಷ ನಿಷ್ಠೆಗೆ ಸಂದ ಗೌರವ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ವೀಕ್ಷಕ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.
ಇದು ಪಕ್ಷದ ಸೋಲಿನಿಂದ ನೊಂದ ಕಾರ್ಯಕರ್ತರಲ್ಲಿ ಪುನಶ್ಚೇತನ ತುಂಬಲು ಸಹಕಾರಿಯಾಗಲಿದೆ. ಹೊಸ ಹುದ್ದೆ ಅಭಿನಂದನಾರ್ಹ ಕೆಲಸಗಳಿಗೆ ಪೂರಕವಾಗಲಿ ಎಂದು ಫಾರೂಕ್ ಉಳ್ಳಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.